ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮರಳಿ ಕಾಂಗ್ರೆಸ್‌ನೊಂದಿಗೆ ಇಲ್ಲ: ಜೆಡಿಎಸ್
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಜೊತೆಗೂಡಿ ಮರಳಿ ಸರಕಾರ ರಚಿಸುವ ಪ್ರಯತ್ನವನ್ನು ತಾನು ಮಾಡುವುದಿಲ್ಲ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ.

ರಾಜಕೀಯ ವ್ಯವಹಾರಗಳ ಸಮಿತಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಕ್ಷದ ವಕ್ತಾರ ವೈ.ಎಸ್.ವಿ ದತ್ತ, ಇನ್ನು ಮುಂದೆ ಬಿಜೆಪಿಯಾಗಲಿ, ಕಾಂಗ್ರೆಸ್‌ನೊಂದಿಗೆ ಆಗಲಿ ಜೊತೆಗೂಡಿ ಸರಕಾರ ರಚಿಸುವ ಪ್ರಯತ್ನವನ್ನು ತಾನು ಮಾಡದೇ ಎರಡು ಪಕ್ಷಗಳಿಂದ ಸಮದೂರ ಕಾಯ್ದುಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ.

ಕುಮಾರಸ್ವಾಮಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಂಡಿದ್ದರಿಂದ ಅಲ್ಪಮತಕ್ಕೆ ಕುಮಾರಸ್ವಾಮಿ ಸರಕಾರ ಇಳಿದಿದೆ. ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಜೆಡಿಎಸ್ ದ್ರೋಹ ಎಸಗಿದೆ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ದತ್ತ, ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದ್ದಕ್ಕೆ ಜೆಡಿಎಸ್ ಪಶ್ಚಾತಾಪ ಪಡುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದೊಂದಿಗೆ ಘಾಸಿಗೊಳಗಾಗಿದ್ದರಿಂದ ಬಿಜೆಪಿಯೊಂದಿಗೆ ಸರಕಾರ ರಚಿಸುವುದು ಅನಿವಾರ್ಯವಾಗಿತ್ತು. ಆದರೆ ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ತನ್ನ ವೋಟ್ ಬ್ಯಾಂಕ್ ಕಳೆದುಕೊಂಡಿತಲ್ಲದೇ ಈ ಅವಧಿಯಲ್ಲಿ ಬಿಜೆಪಿ ವೋಟ್ ಬ್ಯಾಂಕ್ ಲೆಕ್ಕಾಚಾರದಲ್ಲಿ ಲಾಭಗಳಿಸಿತು.ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ನಿರ್ಧಾರದಿಂದ ಜೆಡಿಎಸ್ ತನ್ನ ಜಾತ್ಯಾತೀತ ತತ್ವಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಸಾಧ್ಯವಿಲ್ಲ ಎಂದು ಜೆಡಿಎಸ್ ಅಧ್ಯಕ್ಷ ದೇವೆಗೌಡ ಘೋಷಿಸಿದ ನಂತರ, ಭಾರತೀಯ ಜನತಾ ಪಕ್ಷವು, ಕುಮಾರಸ್ವಾಮಿ ಅವರಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತನ್ನ ಸಂಸದೀಯ ವ್ಯವಹಾರಗಳ ಸಮಿತಿಯ ಸಭೆಯ ನಂತರ ಪ್ರಕಟಿಸಿತು.
ಮತ್ತಷ್ಟು
ಕರ್ನಾಟಕ ವಿದ್ಯಮಾನಕ್ಕೆ ಎಡಪಕ್ಷ ಸ್ವಾಗತ
ಜೆಡಿಎಸ್ ಬಾಂಧವ್ಯಕ್ಕೆ ಬಿಜೆಪಿ ವಿಚ್ಛೇದನ
ಬಿಜೆಪಿ ಬೆಂಬಲ ವಾಪಸ್: ಸರಕಾರ ಪತನ ಕ್ಷಣಗಣನೆ
ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ನಕಾರ
ಜೆಡಿಎಸ್ ಶಾಸಕರ ಅನರ್ಹತೆ ವಿಚಾರಣೆ
ಉಗ್ರರ ದಾಳಿಗೆ ಯೋಧ ಬಲಿ