ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರಕ್ಕಾಗಿ ಕೆಸರೆರಚಾಟ
ಭಾರತೀಯ ಜನತಾ ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಭಾನುವಾರ ರಾಜಭವನಕ್ಕೆ ತೆರಳಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಬಲ ವಾಪಸ್ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸುವುದರೊಂದಿಗೆ ಸಮ್ಮಿಶ್ರ ಸರ್ಕಾರ ಅಧಿಕೃತವಾಗಿ ಪತನಗೊಳ್ಳಲಿದೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಆರೋಪಗಳು ಮಾಡುತ್ತಾ ಕೆಸರೆರಚಾಟದಲ್ಲಿ ತೊಡಗಿವೆ.

ಅಧಿಕಾರ ಹಸ್ತಾಂತರಕ್ಕೆ ತಾವು ಸಿದ್ಧವಾಗಿದ್ದು, ಕಳೆದ 20 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದ ಕೆಲ ಘಟನೆಗಳು ಪುನರಾವರ್ತನೆ ಯಾಗಬಾರದೆಂಬ ಉದ್ದೇಶದಿಂದ ಚರ್ಚೆ ನಡೆಯಬೇಕು ಎಂದು ಬಯಸಿದ್ದರೂ ಅದಕ್ಕೆ ಬಿಜೆಪಿ ಅಸ್ಪದ ನೀಡಲಿಲ್ಲ ಎಂಬುದು ಜೆಡಿಎಸ್ ಮಾಡುತ್ತಿರುವ ಆರೋಪ.

ಬಳ್ಳಾರಿ ಗಣಿ ರೆಡ್ಡಿ 150 ಕೋಟಿ ರೂ. ಸಿಎಂಗೆ ಲಂಚ ನೀಡಿದ್ದಾಗಿ ಮಾಡಿರುವ ಆರೋಪದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ನೊಂದಿದ್ದಾರೆ. ಆದರೆ ಬಿಜೆಪಿ ನಾಯಕರು ಜನಾರ್ದನರೆಡ್ಡಿ ಅವರ ಮನೆಯಲ್ಲೇ ತಂಗಿ ಅಲ್ಲೇ ಊಟ ಮಾಡಿದರು ಎಂಬುದು ದೇವೇಗೌಡರ ಪ್ರಮುಖ ಆರೋಪವಾಗಿದೆ.

ಅದೇ ರೀತಿ ಸಚಿವ ಶ್ರೀರಾಮುಲು ಮುಖ್ಯಮಂತ್ರಿ ವಿರುದ್ಧ ಕೊಲೆ ಪ್ರಯತ್ನ ಆರೋಪ ಮಾಡಿದಾಗಲೂ ಬಿಜೆಪಿ ನಾಯಕರು ಅದನ್ನು ಖಂಡಿಸಲಿಲ್ಲ, ಬಿಎಂಐಸಿ ವಿವಾದದಲ್ಲಿ ನೈಸ್ ಕಂಪನಿಯ ಮುಖ್ಯಸ್ಥ ಅಶೋಕ್ ಖೇಣಿ ಅವರ ಪರ ವಹಿಸಿದ್ದರು ಎಂಬುದು ಮತ್ತೊಂದು ಆರೋಪ. ಜೆಡಿಎಸ್ ನಾಯಕರ ದುಷ್ಸ್ಕತ್ಯಗಳನ್ನು ತಾವು ಬಹಿರಂಗಪಡಿಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಜೆಡಿಎಸ್ ನಾಯಕರ ವಂಚನೆಯ ವರ್ತನೆಯನ್ನು ಜನರಿಗೆ ಬಹಿರಂಗಪಡಿಸಲು ತಾವು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಪ್ರಕಟಿಸಿದ್ದಾರೆ.

ಮತ್ತಷ್ಟು
ಮರಳಿ ಕಾಂಗ್ರೆಸ್‌ನೊಂದಿಗೆ ಇಲ್ಲ: ಜೆಡಿಎಸ್
ಕರ್ನಾಟಕ ವಿದ್ಯಮಾನಕ್ಕೆ ಎಡಪಕ್ಷ ಸ್ವಾಗತ
ಜೆಡಿಎಸ್ ಬಾಂಧವ್ಯಕ್ಕೆ ಬಿಜೆಪಿ ವಿಚ್ಛೇದನ
ಬಿಜೆಪಿ ಬೆಂಬಲ ವಾಪಸ್: ಸರಕಾರ ಪತನ ಕ್ಷಣಗಣನೆ
ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ನಕಾರ
ಜೆಡಿಎಸ್ ಶಾಸಕರ ಅನರ್ಹತೆ ವಿಚಾರಣೆ