ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯ ರಾಜಕೀಯ : ಮುಂದೇನು?
ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ತನ್ನ ಬೆಂಬಲವನ್ನು ವಾಪಸ್ ಪಡೆದರೆ ಏನಾಗಬಹುದು ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ಇಲ್ಲಿದೆ.

ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 225. ಆ ಪೈಕಿ ಬಿಜೆಪಿಗೆ 79 ಶಾಸಕರು, ಕಾಂಗ್ರೆಸ್ಗೆ 65 ಶಾಸಕರು, ಜೆಡಿಎಸ್ಗೆ 51 ಶಾಸಕರಿದ್ದರೆ ಇತರೆ ಶಾಸಕರ ಸಂಖ್ಯೆ 23. ಸರ್ಕಾರ ರಚನೆಗೆ 112 ಶಾಸಕರ ಬೆಂಬಲ ಅಗತ್ಯವಿದೆ. ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ವಾಪಸ್ ಪಡೆದನಂತರ ಕುಮಾರಸ್ವಾಮಿ ಅವರು ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿಯಾದರು.

ಈ ಆ ಸರ್ಕಾರ ಪತನವಾಗುವ ಸಮಯ ಸನ್ನಿಹಿತವಾಗಿದೆ. ಬಿಜೆಪಿ ಬೆಂಬಲ ವಾಪಸ್ ಪಡೆದ ನಂತರ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಆಗಿ ಮುಂದುವರೆಯುವಂತೆ ರಾಜ್ಯಪಾಲರು ಸೂಚಿಸಬಹುದು.

ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಬಹುದು. ಸದನವನ್ನು ವಿಸರ್ಜಿಸುವಂತೆ ಮುಖ್ಯಮಂತ್ರಿಗೆ ರಾಜ್ಯಪಾಲರು ಸೂಚಿಸಬಹುದು.

ಇದಕ್ಕೆ ಕಾಂಗ್ರೆಸ್ನ ನಿಲುವು ಮಹತ್ವವಾದದ್ದು. ರಾಷ್ಟ್ತ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು. ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಗತ್ಯವಾದರೆ ಕೆಲವು ಸಲಹೆಗಾರರೊಂದಿಗೆ ಆಡಳಿತ ನಡೆಸಬಹುದು.
ಮತ್ತಷ್ಟು
ಅಧಿಕಾರಕ್ಕಾಗಿ ಕೆಸರೆರಚಾಟ
ಮರಳಿ ಕಾಂಗ್ರೆಸ್‌ನೊಂದಿಗೆ ಇಲ್ಲ: ಜೆಡಿಎಸ್
ಕರ್ನಾಟಕ ವಿದ್ಯಮಾನಕ್ಕೆ ಎಡಪಕ್ಷ ಸ್ವಾಗತ
ಜೆಡಿಎಸ್ ಬಾಂಧವ್ಯಕ್ಕೆ ಬಿಜೆಪಿ ವಿಚ್ಛೇದನ
ಬಿಜೆಪಿ ಬೆಂಬಲ ವಾಪಸ್: ಸರಕಾರ ಪತನ ಕ್ಷಣಗಣನೆ
ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ನಕಾರ