ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನರ್ಸಿಂಗ್ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್
ಮಾಧ್ಯಮಗಳಲ್ಲಿ ಸುಳ್ಳು ಜಾಹಿರಾತು ನೀಡಿ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆದ ಮೂರು ನರ್ಸಿಂಗ್ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ.

ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾ. ಆನಂದ್ ಭೈರಾರೆಡ್ಡಿ ಅವರಿದ್ದ ವಿಭಾಗೀಯ ಪೀಠ ನರ್ಸಿಂಗ್ ಶಿಕ್ಷಣ ಶಾಲೆಗಳಿಗೆ ನೋಟಿಸ್ ಪೊಲೀಸರ ಮೂಲಕ ನೋಟಿಸ್ ನೀಡುವ ನಿರ್ಧಾರಕ್ಕೆ ಬಂದಿದೆ.

ಅಕ್ಟೋಬರ್ 20ರಂದು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಶಾಲೆಯ ಆಡಳಿತ ಮಂಡಳಿಗಳಿಗೆ ಸೂಚಿಸಿದೆ. ನಗರದ ಕಗ್ಗದಾಸಪುರ ರಸ್ತೆ ವಿಜ್ಞಾನನಗರದ ಎಸ್ಸಿಟಿ ನರ್ಸಿಂಗ್ ಸ್ಕೂಲ್ ಮತ್ತು ಕಾಲೇಜುಗಳು, ವಿಜಯನಗರದ ಸ್ಟೆಲ್ಲಾ ಡಿ ಮರಿಯಾ ಹಾಗೂ ಮಂಜು ನರ್ಸಿಂಗ್ ಸ್ಕೂಲ್ ಮತ್ತು ಕಾಲೇಜುಗಳು ಪತ್ರಿಕೆಗಳಿಗೆ ಜಾಹಿರಾತು ನೀಡಿದ್ದವು.

ರಾಜ್ಯ ಮತ್ತು ಕೇಂದ್ರ ನರ್ಸಿಂಗ್ ಕೌನ್ಸಿಲ್ನಿಂದ ಅನುಮತಿ ಪಡೆಯಲಾಗಿದೆ. ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ ಎಂದು ಪತ್ರಿಕೆಗಳ ಜಾಹಿರಾತಿನಲ್ಲಿ ವಿವರ ನೀಡಲಾಗಿತ್ತು.

ಹಿಂದಿನ ವಿಚಾರಣೆ ಸಂದರ್ಭದಲ್ಲಿ ಈ ಸಂಸ್ಥೆಗಳು ಸುಳ್ಳು ಜಾಹೀರಾತು ನೀಡಿರುವುದು ಗೊತ್ತಾದರೂ ಅವುಗಳ ವಿರುದ್ಧ ಕ್ರಮ ಜರುಗಿಸದ ಸರ್ಕಾರವನ್ನು ನ್ಯಾಯಪೀಠ ತರಾಟೆಗೆ ತೆಗದುಕೊಂಡಿತ್ತು.

ವಂಚನೆ ನಡೆದಿದೆ ಎಂದು ಗೊತ್ತಾದರೂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿತ್ತು.
ಮತ್ತಷ್ಟು
ರಾಜ್ಯ ರಾಜಕೀಯ : ಮುಂದೇನು?
ಅಧಿಕಾರಕ್ಕಾಗಿ ಕೆಸರೆರಚಾಟ
ಮರಳಿ ಕಾಂಗ್ರೆಸ್‌ನೊಂದಿಗೆ ಇಲ್ಲ: ಜೆಡಿಎಸ್
ಕರ್ನಾಟಕ ವಿದ್ಯಮಾನಕ್ಕೆ ಎಡಪಕ್ಷ ಸ್ವಾಗತ
ಜೆಡಿಎಸ್ ಬಾಂಧವ್ಯಕ್ಕೆ ಬಿಜೆಪಿ ವಿಚ್ಛೇದನ
ಬಿಜೆಪಿ ಬೆಂಬಲ ವಾಪಸ್: ಸರಕಾರ ಪತನ ಕ್ಷಣಗಣನೆ