ರಾಜಕೀಯ ಮಹತ್ವದ ಕರ್ನಾಟಕದಲ್ಲಿ ಪ್ರಪ್ರಥಮ ಸರ್ಕಾರವನ್ನು ಸಂಸ್ಥಾಪನೆ ಮಾಡುವ ಮೂಲಕ ದಕ್ಷಿಣ ರಾಜ್ಯಗಳಿಗೂ ತನ್ನ ಸಾಮ್ರಾಜ್ಯ ವಿಸ್ತರಿಸುವ ಕೇಸರಿ ಪಕ್ಷದ ಕನಸು ಕನಸಾಗಿಯೇ ಉಳಿಯಿತು. ಬಿಜೆಪಿ ಪಾಲಿಗೆ ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವ ಪ್ರಕರಣವಾಯಿತು.
ನಾವು ಪಾಠ ಕಲಿತೆವು ಮತ್ತು ಮುಂದಾದರೂ ಎಚ್ಚರಿಕೆಯಿಂದ ಇರಬೇಕು ಎನ್ನುವುದು ಈ ಕತೆಯ ನೀತಿ ಎಂದು ಈ ಬಾರಿ ರಾಜಕೀಯ ಚಾಣಾಕ್ಷ ದೇವೇಗೌಡರಿಂದ ಶಾಕ್ ಹೊಡೆಸಿಕೊಂಡ ಬಿಜೆಪಿಯ ನಾಯಕ ಯಶವಂತ ಸಿನ್ಹಾ ವಿಷಾದದ ನುಡಿ.
ಉತ್ತರಪ್ರದೇಶದ ಮಾಯಾವತಿ ವಿದ್ಯಮಾನವನ್ನು ಬಿಜೆಪಿಗೆ ಈ ಘಟನೆ ನೆನಪಿಗೆ ತಂದಿತು. ಸುಮಾರು ಒಂದು ದಶಕದ ಹಿಂದೆ ಇದೇ ತೆರನಾಗಿ ಬಿಎಸ್‌ಪಿಯ ಮಾಯಾವತಿ ಬಿಜೆಪಿಗೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿದ್ದರು.
ಬಿ.ಎಸ್. ಯಡಿಯೂರಪ್ಪ ಕೇಸರಿ ಪಕ್ಷದ ಪೋಸ್ಟರ್ ಬಾಲಕ ಆಗಿಲ್ಲದೇ ಇರಬಹುದು. ಆದರೆ ಅವರ ನಾಯಕತ್ವದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿ 75 ಸೀಟುಗಳನ್ನು ಬಾಚಿಕೊಂಡಿದ್ದನ್ನು ಕಂಡಿತು. ಬಿಜೆಪಿಗೆ ಒಂದೇ ಒಂದು ಸಮಾಧಾನವೆಂದರೆ ದೇವೇಗೌಡರ ಕಾರ್ಯತಂತ್ರಕ್ಕೆ ಅವಕಾಶ ನೀಡದಿದ್ದುದು.
ಜಾತ್ಯತೀತ ಮುಖವಾಡ ಧರಿಸಿರುವ ದೇವೇಗೌಡರು, ತಮ್ಮ ಪುತ್ರ ಕುಮಾರಸ್ವಾಮಿ ಬಂಡಾಯವೆದ್ದು ಬಿಜೆಪಿ ಜತೆ ಕೈಗೂಡಿಸಿದಾಗ ಇದು ನನ್ನ ಜೀವನದ ಅತ್ಯಂತ ದುಃಖಪೂರಿತ ದಿನ ಕಣ್ಣೀರು ಸುರಿಸಿದ್ದರು. ಅದು ನಡೆದದ್ದು 20 ತಿಂಗಳ ಕೆಳಗೆ, ಬಿಜೆಪಿ ತನ್ನ ರೆಕ್ಕೆಗಳನ್ನು ದಕ್ಷಿಣಕ್ಕೂ ವಿಸ್ತರಿಸುವ ಹತಾಶ ಯತ್ನ ನಡೆಸುತ್ತಿದ್ದಾಗ, ಕಾಂಗ್ರೆಸ್ ಕೇಂದ್ರದಲ್ಲಿ ಮಧುಚಂದ್ರದ ಗಳಿಗೆಯನ್ನು ಅನುಭವಿಸುತ್ತಾ ಹೈದರಾಬಾದ್ ಸಮಾವೇಶದಲ್ಲಿ ತನ್ನ ಬಾಹುಬಲ ಪ್ರದರ್ಶಿಸಿತ್ತು.
|