ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
29ರಂದು ನೈಸ್ ಅರ್ಜಿ ವಿಚಾರಣೆ
ಸಮ್ಮಿಶ್ರ ಸರ್ಕಾರದ ಪತನಕ್ಕೆ ಇದೂ ಒಂದು ಕಾರಣ ಎಂದು ಹೇಳಲಾದ ನಂದಿ ಇನ್ಪಾಸ್ಟ್ತ್ರಕ್ಚರ್ ಕಾರಿಡಾರ್ ಎಂಟರ್ಪೈಸಸ್ (ನೈಸ್) ಕರ್ನಾಟಕ ಸರ್ಕಾರದ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೊರ್ಟ್ ಈ ತಿಂಗಳ 29ಕ್ಕೆ ನಿಗದಿಪಡಿಸಿದೆ.

ಇದೇ ವೇಳೆ ಬೆಂಗಳೂರು-ಮೈಸೂರು ಇನ್ಫ್ರಾ ಸ್ಟ್ತ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಗೆ ಅಡ್ಡಿಪಡಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಬೇಕು ಎಂಬ ನೈಸ್ ವಕೀಲರ ಮನವಿಯನ್ನು ತಳ್ಳಿಹಾಕಿದೆ.

ನ್ಯಾ. ಕೆ.ಜಿ. ಬಾಲಕೃಷ್ಣನ್ ಅವರ ಪೀಠ ಶುಕ್ರವಾರ ನೈಸ್ ಅರ್ಜಿಯನ್ನು ಪರೀಶೀಲಿಸಿತು.

ನೈಸ್ ವಕೀಲ ದುಷ್ಯಂತ್ ದೇವ್ ಅವರು ಬಿಎಂಐಸಿ ಯೋಜನೆಗೆ ರಾಜ್ಯ ಸರ್ಕಾರ ಅಡ್ಡಿ ಪಡಿಸಬಾರದು ಎಂಬ ಸುಪ್ರೀಂಕೋರ್ಟ್ನ ಆದೇಶವಿದ್ದಾಗಲೂ ಸರ್ಕಾರ ಯೋಜನೆ ಜಾರಿಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಮನವರಿಕೆಯಾಗುವವರೆಗೆ ಯಾವ ನೋಟಿಸನ್ನೂ ಜಾರಿಮಾಡಲು ಸಾಧ್ಯವಿಲ್ಲ ಎಂದು ಅವರ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿ ವಿಚಾರಣೆಯನ್ನು ಈ ತಿಂಗಳ 29ಕ್ಕೆ ನಿಗದಿ ಪಡಿಸಿತು.
ಮತ್ತಷ್ಟು
ನಾವು ಪಾಠ ಕಲಿತೆವು: ಯಶವಂತ ಸಿನ್ಹಾ
ನರ್ಸಿಂಗ್ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್
ರಾಜ್ಯ ರಾಜಕೀಯ : ಮುಂದೇನು?
ಅಧಿಕಾರಕ್ಕಾಗಿ ಕೆಸರೆರಚಾಟ
ಮರಳಿ ಕಾಂಗ್ರೆಸ್‌ನೊಂದಿಗೆ ಇಲ್ಲ: ಜೆಡಿಎಸ್
ಕರ್ನಾಟಕ ವಿದ್ಯಮಾನಕ್ಕೆ ಎಡಪಕ್ಷ ಸ್ವಾಗತ