ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚುನಾವಣೆಗೆ ಜೆಡಿಎಸ್ ಒಲವು
PTI
20 ತಿಂಗಳ ಹಿಂದೆ ಅಧಿಕಾರ ಹಂಚಿಕೆ ಒಪ್ಪಂದದ ಅನ್ವಯ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿರುವ ಜೆಡಿಎಸ್ ರಾಜ್ಯದಲ್ಲಿ ಮತ್ತೆ ಹೊಸ ಚುನಾವಣೆಗೆ ಒಲವು ತೋರಿಸಿದ್ದು, ಅಧಿಕಾರದಲ್ಲಿ ಮುಂದುವರಿಯಲು ಕಾಂಗ್ರೆಸ್ ಜತೆ ಹೊಂದಾಣಿಕೆಯನ್ನು ತಳ್ಳಿಹಾಕಿದೆ.

ಬಿಜೆಪಿ ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಪುನಃ ಸೇರಿದ್ದ ರಾಜಕೀಯ ವ್ಯವಹಾರಗಳ ಸಮಿತಿಯ ವಿಸ್ತರಿತ ಸಭೆಯ ಬಳಿಕ ಜನಾದೇಶ ಕೋರುವುದು ನಮ್ಮ ಇಚ್ಛೆ ಎಂದು ಗೌಡರು ಹೇಳಿದರು.
.
ಕಾಂಗ್ರೆಸ್ ಜತೆ ಯಾವುದೇ ಹೊಂದಾಣಿಕೆ ಇದೆಯೇ ಎಂಬ ಪ್ರಶ್ನೆಗೆ, ಇಂತಹ ವ್ಯವಸ್ಥೆಯನ್ನು ಅವರು ತಳ್ಳಿಹಾಕಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ದೂರ ಕಾಯ್ದುಕೊಳ್ಳಲು ಪಕ್ಷ ನಿರ್ಧರಿಸಿದೆಯೆಂದು ಹೇಳಿದರು.ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಕೈಜೋಡಿಸಿ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಕೈಕೊಟ್ಟ ಜೆಡಿಎಸ್‌ಗೆ "ಅಧಿಕಾರದ ಹಸಿವು" ಎಂಬ ವಾದವನ್ನು ಅವರು ತಳ್ಳಿಹಾಕಿದರು.

ಜೆಡಿಎಸ್ ವಿರುದ್ಧ ಬಿಜೆಪಿ ವಿಶೇಷವಾಗಿ ಮುಖ್ಯಮಂತ್ರಿ ಮತ್ತು ಕುಟುಂಬವನ್ನು ಗುರಿಯಾಗಿಟ್ಟುಕೊಂಡು ಅಪಪ್ರಚಾರ ಆರಂಭಿಸಿತಲ್ಲದೇ ಮುಖ್ಯಮಂತ್ರಿ ವಿರುದ್ಧ ಕೊಲೆ ಆರೋಪಿ ಹೊರಿಸಿ ಬಿಜೆಪಿ ಸಚಿವರೊಬ್ಬರು ಎಫ್‌ಐಆರ್ ಕೂಡ ಸಲ್ಲಿಸಿದರು ಎಂದು ದೇವೇಗೌಡ ಆರೋಪಿಸಿದರು. ಮುಖ್ಯಮಂತ್ರಿಯ ಜನಪ್ರಿಯತೆ ಸಹಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ ಎಂದೂ ಗೌಡರು ಹೇಳಿದರು.
ಮತ್ತಷ್ಟು
29ರಂದು ನೈಸ್ ಅರ್ಜಿ ವಿಚಾರಣೆ
ನಾವು ಪಾಠ ಕಲಿತೆವು: ಯಶವಂತ ಸಿನ್ಹಾ
ನರ್ಸಿಂಗ್ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್
ರಾಜ್ಯ ರಾಜಕೀಯ : ಮುಂದೇನು?
ಅಧಿಕಾರಕ್ಕಾಗಿ ಕೆಸರೆರಚಾಟ
ಮರಳಿ ಕಾಂಗ್ರೆಸ್‌ನೊಂದಿಗೆ ಇಲ್ಲ: ಜೆಡಿಎಸ್