ಅಧಿಕಾರ ಹಸ್ತಾಂತರ ವಿಚಾರದಲ್ಲಿ ತಪ್ಪು ಮಾಡಿದೆ, ರಾಜ್ಯದ ಜನತೆ ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ತಪ್ಪು ಮಾಡಿದ್ದು ನಿಜ. ಆದರೆ ತನ್ನ ಹಾಗೂ ತಮ್ಮ ಪಕ್ಷದ ಮೇಲೆ ಮಾತ್ರ ತಪ್ಪನ್ನು ಹೊರಿಸುವುದನ್ನು ನಾನು ಒಪ್ಪಲಾರೆ. ಬಿಜೆಪಿಯೂ ಈ ವಿಚಾರದಲ್ಲಿ ತಪ್ಪು ಮಾಡಿದೆ. ಸಂದರ್ಭ ಬಂದಾಗ ಇದನ್ನು ಪ್ರಕಟಿಸುತ್ತೇನೆ ಎಂದರು.
ಅಕ್ಟೋಬರ್ 2ನೇ ತಾರೀಕಿನಂದೇ ಪದವಿಗೆ ರಾಜೀನಾಮೆ ನೀಡಿ ಅಧಿಕಾರ ಹಸ್ತಾಂತರ ಮಾಡಲು ನಿರ್ಧರಿಸಿದ್ದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅಧಿಕಾರ ಹಸ್ತಾಂತರ ಸಾಧ್ಯವಾಗಲಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ವಚನ ಭ್ರಷ್ಟ ಎಂಬ ಪದವನ್ನು ಬಳಸುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಪಕ್ಷವನ್ನು ರಾಜ್ಯಾದ್ಯಂತ ಇನ್ನಷ್ಟು ಬಲಪಡಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
|