ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ಆತುರ ತೋರಬಾರದಿತ್ತು: ಕುಮಾರ ಖೇದ
PTI
ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಸಂದರ್ಭ ಬಿಜೆಪಿಯು, ತಮಗೆ ಅತಿಹೆಚ್ಚು ಶಾಸಕ ಬಲ ಇರುವುದರಿಂದ ಪರ್ಯಾಯ ಸರಕಾರ ರಚನೆಗೆ ಅವಕಾಶ ನೀಡಬೇಕು ಎಂಬ ಪತ್ರ ಸಲ್ಲಿಸಿದ್ದರೆ ಈಗಿನ ಪರಿಸ್ಥಿತಿ ಒದಗಿ ಬರುತ್ತಿರಲಿಲ್ಲ ಎಂದು ನಿರ್ಗಮನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬುದ್ಧಿವಂತರ ಪಕ್ಷ ಎಂದು ಕೀರ್ತಿ ಪಡೆದಿರುವ ಬಿಜೆಪಿ ನಾಯಕರಿಗೆ ಯಾಕೆ ಈ ತಿಳಿವಳಿಕೆ ಇರಲಿಲ್ಲ ಎಂಬುದು ತಮಗೆ ಅರ್ಥವಾಗಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ನುಡಿದರು.

ತಾವು ಅಧಿಕಾರ ರಚನೆಗೆ ಮುಂದಾದ ಸಮಯದಲ್ಲಿ ಸ್ಥಳೀಯ ಬಿಜೆಪಿ ನಾಯಕರೇ ಮುಂದೆ ಬಂದಿದ್ದರು. ಅದೇರೀತಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಆ ಪಕ್ಷದ ಸ್ಥಳೀಯ ನಾಯಕರೇ ಮುಂದೆ ಬಂದು ಚರ್ಚೆ ನಡೆಸಬೇಕಾಗಿತ್ತು ಎಂದ ಅವರು, ಆದರೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಯಶವಂತ ಸಿನ್ಹಾ ಮಧ್ಯಪ್ರವೇಶ ಮಾಡಿದ್ದೇ ಈ ಎಲ್ಲಾ ಅನಾಹುತಗಳಿಗೆ ಕಾರಣ ಎಂದು ಟೀಕಿಸಿದರು.

ಅಕ್ಟೋಬರ್ 2ರಂದೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧವಾಗಿದ್ದರೂ ಅಧಿಕಾರ ಹಸ್ತಾಂತರ ವಿಷಯದಲ್ಲಿ ಆತುರದ ಕ್ರಮಕ್ಕೆ ಬಿಜೆಪಿ ಮುಂದಾಯಿತು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರು.

ಅಂದಿನಿಂದ ನಡೆದ ಘಟನೆಗಳಿಗೆ ತಮ್ಮಿಂದ ಅಪರಾಧವಾಗಿದ್ದರೆ ತಮ್ಮನ್ನು ಕ್ಷಮಿಸುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.
ಮತ್ತಷ್ಟು
ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ
ಕರ್ನಾಟಕ: ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು
ಕುಮಾರಸ್ವಾಮಿ ರಾಜೀನಾಮೆ
ಬಿಜೆಪಿ-ಜೆಡಿಎಸ್ ಮರುವಿವಾಹಕ್ಕೆ ಸಜ್ಜು?
ರಾಜ್ಯದಲ್ಲಿ ಕೇಂದ್ರಾಡಳಿತಕ್ಕೆ ಕಾಂಗ್ರೆಸ್ ಒತ್ತಾಯ
ಗೌಡರ ಕುಟುಂಬ ಪ್ರಹಾರ: ಚಿಗಿತುಕೊಂಡ ಗಣಿ ರೆಡ್ಡಿ