ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ?
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಅಧಿಕೃತವಾಗಿ ಘೋಷಿಸಲು ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕಾಗಿ ಶಿಫಾರಸು ಮಾಡಿ ಕಳುಹಿಸಿರುವ ಪತ್ರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ತಲುಪಿದೆ.

ಈ ಶಿಫಾರಸು ಕುರಿತು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಮಂಗಳವಾರ ಸಭೆ ಸೇರಿ ನಿರ್ಣಯ ಮಾಡಲಿದೆ.

ಈ ನಡುವೆ ಜೆಡಿಎಸ್ ಶಾಸಕ, ದೇವೇಗೌಡರ ಕುಟುಂಬದ ರಾಜಕಾರಣವನ್ನು ವಿರೋಧಿಸುವ ಪಿ.ಜಿ.ಆರ್ ಸಿಂಧ್ಯಾ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ತೋಳ್ಬಲದ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ವಿಧಾನಸಭೆಯನ್ನು ತಾತ್ಕಾಲಿಕ ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತವನ್ನು ಹೇರಿದರೆ ಕುದುರೆ ವ್ಯಾಪಾರ ನಡೆಯುವ ಸಂಭವ ಇರುವುದರಿಂದ ವಿಧಾನಸಭೆಯನ್ನು ವಿಸರ್ಜಿಸುವಂತೆ ತಾವು ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ಮತ್ತಷ್ಟು
ಬಿಜೆಪಿ ಆತುರ ತೋರಬಾರದಿತ್ತು: ಕುಮಾರ ಖೇದ
ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ
ಕರ್ನಾಟಕ: ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು
ಕುಮಾರಸ್ವಾಮಿ ರಾಜೀನಾಮೆ
ಬಿಜೆಪಿ-ಜೆಡಿಎಸ್ ಮರುವಿವಾಹಕ್ಕೆ ಸಜ್ಜು?
ರಾಜ್ಯದಲ್ಲಿ ಕೇಂದ್ರಾಡಳಿತಕ್ಕೆ ಕಾಂಗ್ರೆಸ್ ಒತ್ತಾಯ