ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೌಲ್ಯರಹಿತ ರಾಜಕಾರಣಕ್ಕೆ ಶಾಸಕರು ಬಲಿ
ಜನರು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ ಜನಪ್ರತಿನಿಧಿಗಳು ಸ್ವಯಂಕೃತ ಅಪರಾಧದಿಂದಲೇ ಅಧಿಕಾರ ಕೈಜಾರುವಂತೆ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಸ್ವಾರ್ಥ ರಾಜಕಾರಣಕ್ಕೆ ಸೋಮವಾರ ನಡೆದ ರಾಜಕೀಯ ಬೆಳವಣಿಗೆಗಳು ಸ್ಪಷ್ಟ ಉದಾಹರಣೆ. ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ ಎಂಬ ಹಲವಾರು ಶಾಸಕರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಿದೆ.

ತಮ್ಮ ತಮ್ಮ ಪ್ರತಿಷ್ಠೆಗೆ ಜೋತುಬಿದ್ದ ನಾಯಕರ ಹಠಮಾರಿ ಧೋರಣೆಯಿಂದಾಗಿ ಕರ್ನಾಟಕ ರಾಷ್ಟ್ರಪತಿ ಆಡಳಿತಕ್ಕೆ ಗುರಿಯಾದಂತಾಗಿದೆ. ಇಂಥ ಪರಿಸ್ಥಿತಿಗೆ ತಮ್ಮನ್ನು ತಂದೊಡ್ಡಿದ ನಾಯಕರ ವಿರುದ್ಧ ಜೆಡಿಎಸ್ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ.

ಅಧಿಕಾರ ಹಸ್ತಾಂತರ ಬಿಕ್ಕಟ್ಟು ಸೃಷ್ಟಿಯಾಗಲು ಎಚ್.ಡಿ.ದೇವೇಗೌಡ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರ ಪ್ರವೇಶ ಕಾರಣ ಎಂದು ದೂರುತ್ತಿದ್ದಾರೆ.

ತಮ್ಮ ಯತ್ನಕ್ಕೆ ಹಾಗೂ ಸಲಹೆಗೆ ನಾಯಕರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪಕ್ಷ ನಾಶದ ಅಂಚಿಗೆ ತಲುಪಲು ನಾಯಕರೇ ಕಾರಣ ಎಂದು ಟೀಕಿಸುತ್ತಿದ್ದಾರೆ.

ತಮ್ಮ ಕ್ಷೇತ್ರಗಳಲ್ಲಿ ಹಿಂದೆಂದೂ ಕಾಣದ ಅಭಿವೃದ್ದಿ ಕೆಲಸಗಳಾಗಿವೆ. ಇದಕ್ಕೆ ದೋಸ್ತಿ ಸರ್ಕಾರವೇ ಕಾರಣ. ಪಕ್ಷ ಯಾವುದಾದರು ಆಗಿರಲಿ, ತತ್ವ ಸಿದ್ದಾಂತಗಳು ಏನೇ ಇರಲಿ, ಜನರು ಕೇಳುವುದು ಅಭಿವೃದ್ದಿಯನ್ನು. ಅಧಿಕಾರ ಹಸ್ತಾಂತರ ವಿಷಯದಲ್ಲಿ ಪಕ್ಷದ ವರಿಷ್ಠರ ವರ್ತನೆಯನ್ನು ಜನ ಒಪ್ಪುವುದಿಲ್ಲ.

ನಾಯಕರು ತಮ್ಮನ್ನು ಕೆರೆಗೆ ದೂಡಿದ್ದಾರೆ. ಈಗ ಈಜಿ ದಡ ಸೇರುವ ಸಾಮರ್ಥ್ಯ ಇರುವವರು ಮಾತ್ರ ಚುನಾವಣೆಯಲ್ಲಿ ಗೆದ್ದು ಬರಲಿದ್ದಾರೆ. ಇನ್ನುಳಿದವರು ನೀರು ಪಾಲು ಆಗಲೇಬೇಕು. ಇದಕ್ಕಾಗಿ ಬಿಜೆಪಿ ಮೈತ್ರಿ ಮುಂದುವರೆದರೆ ಒಳ್ಳೆಯದು ಎಂಬುದು ಶಾಸಕರ ಆಶಯವಾಗಿದೆ.
ಮತ್ತಷ್ಟು
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ?
ಬಿಜೆಪಿ ಆತುರ ತೋರಬಾರದಿತ್ತು: ಕುಮಾರ ಖೇದ
ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ
ಕರ್ನಾಟಕ: ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು
ಕುಮಾರಸ್ವಾಮಿ ರಾಜೀನಾಮೆ
ಬಿಜೆಪಿ-ಜೆಡಿಎಸ್ ಮರುವಿವಾಹಕ್ಕೆ ಸಜ್ಜು?