ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸುವರ್ಣ ಮಹೋತ್ಸವದ ಮೇಲೆ ಕರಿನೆರಳು
ಕರ್ನಾಟಕ ರಾಜ್ಯ ನಿರ್ಮಾಣದ ಸುವರ್ಣ ಮಹೋತ್ಸವವನ್ನು ಇಡೀ ವರ್ಷ ಆಚರಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪುಗೊಂಡಾಗ ಧರಂಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು.

ಅಧಿಕಾರ ಸೂತ್ರವನ್ನು ಹಿಡಿದ ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುವರ್ಣ ಕರ್ನಾಟಕದ ಉತ್ಸವವನ್ನು ವರ್ಷವಿಡೀ ವಿಜೃಂಭಣೆಯಿಂದ ರಾಜ್ಯದ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಸಿದ್ಧತೆಯನ್ನು ನಡೆಸಿ, ಅದಕ್ಕೆ ಅಗತ್ಯವಾದ ಹಣವನ್ನೂ ಮಂಜೂರು ಮಾಡಿತ್ತು.

ಸಹಜವಾಗಿಯೇ ಸುವರ್ಣ ಕರ್ನಾಟಕದ ಉತ್ಸವದಲ್ಲಿ ಉತ್ತರದ ಗಡಿಯಲ್ಲಿನ ಮಹಾನಗರವಾದ ಬೆಳಗಾವಿ ಹೆಚ್ಚು ಗಮನ ಸೆಳೆದಿತ್ತು.

ಬೆಳಗಾವಿಯಲ್ಲಿ ವಿಧಾನಮಂಡಲದ ಒಂದು ಅಧಿವೇಶನವನ್ನು ಅದ್ದೂರಿಯಾಗಿ ನಡೆಸಿ, ಆ ನಗರವನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡುವ, ಅಲ್ಲಿ ಒಂದು ವಿಧಾನಸೌಧವನ್ನೇ ಕಟ್ಟುವ ಪ್ರಕಟಣೆಗಳೂ ಹೊರಬಿದ್ದಿದ್ದು ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲೇ.

ಸುವರ್ಣ ಕರ್ನಾಟಕ ವರ್ಷದ ಆಚರಣೆ ಅಧಿಕೃತವಾಗಿ ಅ. 31ಕ್ಕೆ ಮುಗಿಯಬೇಕಿತ್ತು. ಮೈಸೂರಿನಲ್ಲಿ ಸಂಪ್ರದಾಯದಂತೆ ನಡೆಯುವ ನವರಾತ್ರಿ ದಸರಾ ನಾಡಹಬ್ಬದ ಉತ್ಸವಕ್ಕೆ ಹೆಚ್ಚು ಮೆರುಗನ್ನು ಹೊಂದಿಸಿಕೊಟ್ಟು ಅನಂತರ ವಿಜೃಂಭಣೆ-ವೈಭವದ ಶೃಂಗ ಮುಟ್ಟುವುದಕ್ಕೆ ಅಗತ್ಯವಾದ ಕೊನೆಯ ದಿನಗಳ ಆದೇಶಗಳನ್ನು ನೀಡಬಲ್ಲ ರಾಜಕೀಯ ಮುಖಂಡತ್ವಕ್ಕೆ ಲಕ್ವ ಹೊಡೆಯುವ ರೀತಿಯಲ್ಲಿ ಬೆಳವಣಿಗೆಗಳು ಕಂಡುಬಂದಿದ್ದು ತೀರ ಅನೀರೀಕ್ಷಿತ.

ರಾಜ್ಯದ ಆಡಳಿತ ಈಗ ಯಾರ ಕೈಯಲ್ಲೇ ಇರಲಿ ಸುವರ್ಣ ಕರ್ನಾಟಕದ ಮಹೋತ್ಸವದ ಕೊನೆಯ ದಿನಗಳು ಆಚರಣೆ, ಆ ಉತ್ಸವದ ಭಾವನಾತ್ಮಕ ವೈಭವಕ್ಕೆ ತಕ್ಕಂತೆ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ, ಅಧಿಕಾರಸ್ಥ ರಾಜಕಾರಣಿಗಳು ಇಲ್ಲದಿದ್ದರೇನಂತೆ? ಅದು ಕರ್ನಾಟಕ ರಾಜ್ಯದ ಜನರ ಮಹೋತ್ಸವವಾಗಿದ್ದು, ಅವರ ನಿರೀಕ್ಷೆಯಂತೆ ನಡೆಯಬೇಕಾಗಿದೆ.
ಮತ್ತಷ್ಟು
ಮೌಲ್ಯರಹಿತ ರಾಜಕಾರಣಕ್ಕೆ ಶಾಸಕರು ಬಲಿ
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ?
ಬಿಜೆಪಿ ಆತುರ ತೋರಬಾರದಿತ್ತು: ಕುಮಾರ ಖೇದ
ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ
ಕರ್ನಾಟಕ: ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು
ಕುಮಾರಸ್ವಾಮಿ ರಾಜೀನಾಮೆ