ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಿಡ್ನಿ ಕಸಿ : ನೂತನ ನೀತಿ ಜಾರಿಗೆ
ಇತ್ತೀಚಿಗೆ ನೆಲಮಂಗಲದ ಬಳಿ ಕಿಡ್ನಿ ಅಪಹರಣ ಹಗರಣ ಬಹಿರಂಗಗೊಂಡ ನಂತರ ಕಿಡ್ನಿ ಕಸಿಮಾಡಲು ಅನುಮೋದನೆ ನೀಡುವ ಅಧಿಕೃತ ಸಮಿತಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಕಿಡ್ನಿ ಅಪಹರಣ ನಡೆಯದಂತೆ ನಿವಾರಿಸಲು ಸರ್ಕಾರ ಕೈಗೊಂಡ ಕ್ರಮಗಳು ಕಿಡ್ನಿ ಕಸಿಮಾಡುವ ವ್ಶೆದ್ಯರಿಗೆ ಕಿರಿಕಿರಿಯಾಗಿಸಿವೆ. ಸಂಬಂಧಿತರಲ್ಲದ ಕಿಡ್ನಿದಾತರ ಸರಿಯಾದ ವಿಳಾಸದ ತಪಾಸಣೆ ನಡೆಸಿ ಅದನ್ನು ಧ್ರವೀಕರಿಸುವ ಜವಾಬ್ಧಾರಿಯನ್ನು ಕಿಡ್ನಿ ಕಸಿಮಾಡುವ ಆಸ್ಪತ್ರೆಗಳಿಗೆ ವಹಿಸಲಾಗಿದೆ.

ರೋಗಿಯ ಪರಿಸ್ಥಿತಿಯನ್ನು ಗುರುತಿಸಿ ಸುಧಾರಿಸುವದಷ್ಟೇ ವೈದ್ಯರ ಕೆಲಸ. ಆದರೆ ದಾತರ ಛಾಯಾಚಿತ್ರ, ಅವರ ವಿಳಾಸವನ್ನು ಪರೀಶೀಲಿಸುವ ಕೆಲಸವನ್ನು ವ್ಶೆದ್ಯರಿಗೆ ನೀಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ರಾಜ್ಯ ನೆಫ್ರಾಲಜಿ ವೈದ್ಯರ ಸಂಘದ ಸದಸ್ಯರೊಬ್ಬರು ಹೇಳಿದ್ದಾರೆ.

ಹಿಂದೆ ಇಂಥ ಪ್ರಕರಣಗಳಲ್ಲಿ ಕಿಡ್ನಿದಾತರ ವಿಳಾಸವನ್ನು ಆಸ್ಪತ್ರೆಗಳ ಸಿಬ್ಬಂದಿ ಪರೀಶೀಲಿಸುತ್ತಿತ್ತು. ಆದರೆ ನಂತರ ಪೊಲೀಸರೂ ಈ ಪರಿಶೀಲನೆ ನಡೆಸುತ್ತಿದ್ದರಿಂದ ಆಸ್ಪತ್ರೆಗಳು ಆ ಕಾರ್ಯದಿಂದ ಹಿಂದೆ ಸರಿದವು.

ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳು ವಿಳಾಸವನ್ನು ಪ್ರಮಾಣಿಕರಿಸಬೇಕು ಎಂದು ಅಧಿಕೃತ ಸಮಿತಿ ಒಂದು ಸುತ್ತೋಲೆಯನ್ನು ಹೊರಡಿಸಿದೆ ಎಂದು ಪ್ರಸ್ತುತ ಇರುವ ಅಧಿಕೃತ ಸಮಿತಿಯ ಅಧ್ಯಕ್ಷ ಬಿ.ಎಸ್.ರೆಡ್ಡಿ ಹೇಳಿದ್ದಾರೆ.

ಇದು ಆಸ್ಪತ್ರೆಗಳಿಗೆ ಸಾಧ್ಯವೇ ಎಂಬುದು ಕಿಡ್ನಿ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿರುವ ಆಸ್ಪತ್ರೆಗಳ ಪ್ರಶ್ನೆ.
ಮತ್ತಷ್ಟು
ಸುವರ್ಣ ಮಹೋತ್ಸವದ ಮೇಲೆ ಕರಿನೆರಳು
ಜೆಡಿಎಸ್ ವಿಳಂಬ ನೀತಿ:ಬಿಜೆಪಿಗೆ ತಪ್ಪಿದ ಅಧಿಕಾರ
ಮೌಲ್ಯರಹಿತ ರಾಜಕಾರಣಕ್ಕೆ ಶಾಸಕರು ಬಲಿ
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ?
ಬಿಜೆಪಿ ಆತುರ ತೋರಬಾರದಿತ್ತು: ಕುಮಾರ ಖೇದ
ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ