ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕರ್ನಾಟಕ ರಾಜಕೀಯ: ರಾಷ್ಟ್ರಪತಿ ಆಡಳಿತಕ್ಕೆ ಅಸ್ತು
ನಿರೀಕ್ಷೆಯಂತೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಕೇಂದ್ರ ಸಚಿವ ಒಪ್ಪಿಗೆ ಸೂಚಿಸಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೊನೆಗೊಂಡ ನಂತರ, ಎಚ್. ಡಿ. ಕುಮಾರಸ್ವಾಮಿ ಅವರಿಗೆ ನೀಡಿದ್ದ ಬೆಂಬಲವನ್ನು ಭಾರತೀಯ ಜನತಾ ಪಕ್ಷ ಹಿಂದೆಗೆದುಕೊಂಡ ಕಾರಣ ಕುಮಾರಸ್ವಾಮಿ ಸರಕಾರ ಅಲ್ಪಮತಕ್ಕೆ ಇಳಿದಿತ್ತು.

ಬೆಂಬಲ ವಾಪಸ್ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಯ ನಂತರ ರಾಜ್ಯದಲ್ಲಿ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟಿನ ವರದಿಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಕೇಂದ್ರಕ್ಕೆ ಸೋಮವಾರ ಸಲ್ಲಿಸಿದ್ದರು.

ಮದ್ಯಂತರ ಚುನಾವಣೆಯನ್ನು ತಪ್ಪಿಸುವುದಕ್ಕೆ ಸೋಮವಾರ ತಡ ರಾತ್ರಿ ಜೆಡಿಎಸ್, ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಆದರೆ ಜೆಡಿಎಸ್ ತೆಗೆದುಕೊಂಡ ತಕ್ಷಣದ ನಿಲುವನ್ನು ರಾಜ್ಯಪಾಲರು ಪುರಸ್ಕರಿಸದೇ ಸಂವಿಧಾನದ 356ನೇ ಕಲಂ ಅನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವುದು ಸೂಕ್ತ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು.

20 ತಿಂಗಳ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ಒಪ್ಪದಿದ್ದರಿಂದ ರಾಜ್ಯದಲ್ಲಿ ಅಕ್ಟೋಬರ್ ಎರಡರಿಂದ ರಾಜ್ಯ ರಾಜಕಾರಣಕ್ಕೆ ತಿರುವು ಬಂದಿತ್ತು.

ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ನಿವಾಸದಲ್ಲಿ ಇಂದು ಸಭೆ ಸೇರಿದ ಕೇಂದ್ರ ಮಂತ್ರಿ ಮಂಡಳ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿತು. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ, ಅರ್ಜುನ್ ಸಿಂಗ್, ಎ. ಕೆ ಅಂತೋಣಿ, ಎಚ್. ಆರ್. ಭಾರದ್ವಾಜ್, ರಾಷ್ಟ್ರೀಯ ಸುರಕ್ಷಾ ಸಲಹಾಗಾರ ಎಂ.ಕೆ ನಾರಾಯಣನ್, ಮತ್ತು ಕೇಂದ್ರ ಗೃಹ ಖಾತೆ ಕಾರ್ಯದರ್ಶಿ ಮಧುಕರ ಗುಪ್ತಾ ಉಪಸ್ಥಿತರಿದ್ದರು.
ಮತ್ತಷ್ಟು
ಕಿಡ್ನಿ ಕಸಿ : ನೂತನ ನೀತಿ ಜಾರಿಗೆ
ಸುವರ್ಣ ಮಹೋತ್ಸವದ ಮೇಲೆ ಕರಿನೆರಳು
ಜೆಡಿಎಸ್ ವಿಳಂಬ ನೀತಿ:ಬಿಜೆಪಿಗೆ ತಪ್ಪಿದ ಅಧಿಕಾರ
ಮೌಲ್ಯರಹಿತ ರಾಜಕಾರಣಕ್ಕೆ ಶಾಸಕರು ಬಲಿ
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ?
ಬಿಜೆಪಿ ಆತುರ ತೋರಬಾರದಿತ್ತು: ಕುಮಾರ ಖೇದ