ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಷ್ಟ್ರಪತಿ ಆಡಳಿತಕ್ಕೆ ಸಮ್ಮಿಶ್ರ ಸರಕಾರ ಕಾರಣ:ಖರ್ಗೆ ಆರೋಪ
ಎಚ್.ಡಿ ಕುಮಾರಸ್ವಾಮಿ ಅವರ ರಾಜೀನಾಮೆಯ ನಂತರ ರಾಜ್ಯದಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲಾಯಿತು ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ತಿಳಿಸಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರಲು ಕಾರಣವಾದ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರಕಾರವು ಜನರಲ್ಲಿ ಕ್ಷಮೆಯನ್ನು ಯಾಚಿಸಬೇಕೆಂದು ಕೆಪಿಪಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.

ಬದಲಿ ಸರಕಾರವನ್ನು ರಚಿಸುವ ಯಾವುದೇ ಸಾಧ್ಯತೆಗಳು ಇಲ್ಲದ ಕಾರಣ ರಾಜ್ಯಪಾಲ ರಾಮೇಶ್ವರ್ ತಾಕೂರ್ ಅವರಿಗೆ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವುದಲ್ಲದೆ ಬೇರೆ ಯಾವ ದಾರಿಯೂ ಇರಲಿಲ್ಲ ಎಂದು ಖರ್ಗೆ ಹೇಳಿದ್ದಾರೆ.

ಆಡಳಿತ ಯಂತ್ರವು ಸಂಪೂರ್ಣವಾಗಿ ಪತನಗೊಂಡಿದೆ, ಜೆಡಿಎಸ್-ಬಿಜೆಪಿ ತನ್ನ 20 ತಿಂಗಳ ಆಡಳಿತದಲ್ಲಿ ನಡೆಸಿದ ಅಭಿವೃದ್ಧಿಯು ನಿಲುಗಡೆಯಾಗಿದೆ ಎಂದು ಖರ್ಗೆ ಆರೋಪಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಲು ಜೆಡಿಎಸ್-ಬಿಜೆಪಿ ಉಂಟುಮಾಡಿದ ರಾಜಕೀಯ ಘರ್ಷಣೆಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಆರೋಪಿಸಿದ್ದಾರೆ.
ಮತ್ತಷ್ಟು
ಕರ್ನಾಟಕ ರಾಜಕೀಯ: ರಾಷ್ಟ್ರಪತಿ ಆಡಳಿತಕ್ಕೆ ಅಸ್ತು
ಕಿಡ್ನಿ ಕಸಿ : ನೂತನ ನೀತಿ ಜಾರಿಗೆ
ಸುವರ್ಣ ಮಹೋತ್ಸವದ ಮೇಲೆ ಕರಿನೆರಳು
ಜೆಡಿಎಸ್ ವಿಳಂಬ ನೀತಿ:ಬಿಜೆಪಿಗೆ ತಪ್ಪಿದ ಅಧಿಕಾರ
ಮೌಲ್ಯರಹಿತ ರಾಜಕಾರಣಕ್ಕೆ ಶಾಸಕರು ಬಲಿ
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ?