ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಪೊಲೀಸನನ್ನು ಕೊಂದ ಎಸಿಪಿ ಸಹೋದರಿ: ಪ್ರತಿಭಟನೆ
ಮಂಗಳವಾರ ತಡ ರಾತ್ರಿ ಗಸ್ತಿನಲ್ಲಿದ್ದ ಸಂಪಂಗಿರಾಮನಗರ ಪೊಲೀಸ್ ಠಾಣೆಯ ಪೊಲೀಸ್ ಮುಖ್ಯಪೇದೆಯನ್ನು ಕೆಂಗೇರಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಮೇಶ್ ಬಾಬು ಅವರ ಮಾನಸಿಕ ಸ್ಥಿಮಿತವಿಲ್ಲದ ಸಹೋದರಿ ಚಾಕುವಿನಿಂದ ಇರಿದಿದ್ದರಿಂದ ಪೇದೆ ಸಾವನ್ನಪ್ಪಿದ್ದಾರೆ.

ಇದೊಂದು ಕೊಲೆ ಸಂಚಾಗಿದ್ದು, ಹಂತಕಳನ್ನು ಬೇಕೆಂದು ಮಾನಸಿಕ ಅಸ್ವಸ್ಥೆಎಂದು ಹೇಳಲಾಗುತ್ತಿದೆ ಎಂಬುದು ಮೃತರ ಸಂಬಂಧೀಕರ ಆರೋಪ.

ತಾವು ಸಹಾ ಕೊಲೆ ಮಾಡುತ್ತೇವೆ, ತಾವು ಸಹಾ ಹುಚ್ಚರೇ, ತಮ್ಮನ್ನು ಬಂಧಿಸಿ ಎಂಬುದಾಗಿ ಧಿಕ್ಕಾರ ಕೂಗುತ್ತಾ ಸಂಪಂಗಿ ರಾಮನಗರ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಗಳವಾರ ರಾತ್ರಿ 11.30ರ ಸಮಯದಲ್ಲಿ ಪೇದೆ ಮಾದಯ್ಯ (45) ಹಾಗೂ ಪ್ರಕಾಶ್ ಎಂಬವರು ಗಸ್ತಿನಲ್ಲಿ ಬರುತ್ತಿದ್ದರು.

ಆಗ ಓಡಿಬಂದ ಗೀತಾ (45) ತನ್ನ ಕೈಯನ್ನು ಬೆಳಗ್ಗೆ ಯಾರೋ ಕುಯ್ದಿದ್ದಾರೆ. ಈಗಲೂ ರಕ್ತ ಸುರಿಯುತ್ತಿದೆ ನೋಡಿ ಎಂದು ಪೊಲೀಸರಿಗೆ ತೋರಿಸಿದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮಾದಯ್ಯ ಹಾಗೂ ಪ್ರಕಾಶ್ ಸಿದ್ಧವಾಗುತ್ತಿದ್ದರು.

ಅಷ್ಟರಲ್ಲಿ ಚಾಕು ತೆಗೆದ ಗೀತಾ ಮಾದಯ್ಯ ಅವರ ಕುತ್ತಿಗೆಗೆ ಇರಿದಳು. ಮಾದಯ್ಯ ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾದಯ್ಯ ಅವರು ಕೊನೆಯುಸಿರೆಳೆದರು.

ಪೊಲೀಸರು ಗೀತಾಳನ್ನು ವಶಕ್ಕೆ ತೆಗೆದುಕೊಂಡಿದ್ದರೂ ಪೊಲೀಸ್ ಅಧಿಕಾರಿಯ ಸಹೋದರಿ ಯಾದ್ದರಿಂದ ಅವಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದು ಮೃತರ ಸಂಬಂಧೀಕರ ದೂರಾಗಿದೆ.
ಮತ್ತಷ್ಟು
ಸರಕಾರ ರಚನೆಗೆ ಬಿಜೆಪಿ ಯತ್ನ
ಕುದುರೆ ವ್ಯಾಪಾರಕ್ಕೆ ಅವಕಾಶ:ದೇವೇಗೌಡ
ರಾಷ್ಟ್ರಪತಿ ಆಡಳಿತಕ್ಕೆ ಸಮ್ಮಿಶ್ರ ಸರಕಾರ ಕಾರಣ:ಖರ್ಗೆ ಆರೋಪ
ಕರ್ನಾಟಕ ರಾಜಕೀಯ: ರಾಷ್ಟ್ರಪತಿ ಆಡಳಿತಕ್ಕೆ ಅಸ್ತು
ಕಿಡ್ನಿ ಕಸಿ : ನೂತನ ನೀತಿ ಜಾರಿಗೆ
ಸುವರ್ಣ ಮಹೋತ್ಸವದ ಮೇಲೆ ಕರಿನೆರಳು