ಇತ್ತೀಚಿಗೆ ವದಂತಿಗಳದ್ದೇ ರಾಜ್ಯ ರಾಜಧಾನಿಯಲ್ಲಿ ಕಾರುಬಾರು. ಮಂಗಳವಾರ ಎಲ್ಲವೂ ಇತ್ಯರ್ಥ್ಯವಾಯಿತು ಎಂಬ ಸ್ಥಿತಿ. ಅದರೆ, ರಾಷ್ಟ್ತ್ರಪತಿ ಆಡಳಿತ ಬಂದು ವಿಧಾನಸಭೆ ಅಮಾನತ್ತಾಗಿದೆ. ಮತ್ತೆ ವದಂತಿಗಳದ್ದೇ ಕಾರುಬಾರಾಗಿದೆ.
ಮುಂದೇನು ಎಂಬ ಗಾಬರಿ. ರಾಜಕೀಯ ಪಕ್ಷಗಳ ಮುಖಂಡರು ಯಾರು ಯಾವುದನ್ನೂ ನಿರಾಕರಿಸುತ್ತಿಲ್ಲ. ಇಲ್ಲ ಅಥವಾ ಹೌದೆಂದು ಹೇಳುತ್ತಿಲ್ಲ. ಹಾಗಾಗಿ ಈಗ ಹಬ್ಬುತ್ತಿರುವ ವದಂತಿಗಳ ಪಟ್ಟಿ ಹೀಗಿದೆ:
ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತೆ ಮೈತ್ರಿ ಮಾಡಿಕೊಳ್ಳುತ್ತವೆ. ಘಟಾನುಘಟಿಗಳು ನಾಯಕರ ಮಧ್ಯೆ ಮಾತುಕತೆಗೆ ಚಾಲನೆ ದೊರೆತಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ತರಲೆಂದೇ ವಿಧಾನಸಭೆ ಅಮಾನತಿನಲ್ಲಿಡಲಾಗಿದೆಯಂತೆ. ಕೇಂದ್ರ ಸಚಿವ, ಹಿರಿಯ ಕಾಂಗೆಸ್ ಮುಖಂಡ ಎಂ.ವಿ. ರಾಜಶೇಖರನ್ ಹೊಸ ಮುಖ್ಯಮಂತ್ರಿಯಂತೆ. ಎಚ್.ಡಿ.ರೇವಣ್ಣ ಉಪ ಮುಖ್ಯಮಂತ್ರಿ ಯಾಗುತ್ತಾರಂತೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುತ್ತಾರಂತೆ. ಕಾಂಗ್ರೆಸ್ನಲ್ಲಿರುವ ದೇವೇಗೌಡರ ವಿರೋಧಿಗಳಿಂದ ಎರಡು ಪಕ್ಷಗಳ ನಡುವೆ ಮೈತ್ರಿಗೆ ಅಪಸ್ವರವಂತೆ.
ಇವೆಲ್ಲಾ ಒಂದು ಕ್ಪಡೆಯಾದರೆ ಮತ್ತೊಂದು ಕಡೆ ಜೆಡಿಎಸ್ ಒಡೆದು ಹೋಳಾಗಿ ಒಂದು ಬಣ ಬಿಜೆಪಿ ಜತೆ ಹೋಗುತ್ತವಂತೆ. ಜೆಡಿಎಸ್ ಪಕ್ಷವೇ ಬಿಜೆಪಿಯನ್ನು ಪುನಃ ಬೆಂಬಲಿಸುತ್ತದಂತೆ. ಕಾಂಗೆಸ್ ಹೈಕಮಾಂಡ್ಗೆ ತಕ್ಷಣಕ್ಕೆ ಚುನಾವಣೆ ಇಷ್ಟವಿಲ್ಲವಂತೆ. ಈ ವದಂತಿಗಳು ನಿಜವೂ ಆಗಬಹುದು ಅಥವಾ ಸುಳ್ಳು ಆಗಬಹುದು ಎಂಬುದು ರಾಜಕೀಯ ಪಕ್ಷಗಳ ಮುಖಂಡರ ಮಾತು.
|