ಹಾಸನ ಜೆಡಿಎಸ್ ದೇವೇಗೌಡರ ಸ್ವಸ್ಥಳ. ಅವರದ್ದೇ ಅಲ್ಲ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರ ಹುಟ್ಟೂರು ಹಾಸನ.
ಹಾಗಾಗಿ ಅವರ ಕುಟುಂಬ ಸದಸ್ಯರು ಅಧಿಕಾರದಲ್ಲಿದ್ದಾಗ ಅವರ ಊರನ್ನು ಅಭಿವೃದ್ದಿ ಪಡಿಸುವುದು ಸಹಜ. ಅದಕ್ಕೆ ಯಾರದ್ದೂ ತಕರಾರಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಹಾಸನದಲ್ಲಿ ಹಲವಾರು ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದ್ದಾರೆ. ಅದಕ್ಕು ಯಾರದ್ದೂ ತಕರಾರಿಲ್ಲ. ಆದರೆ ತಿರುಪತಿ ಕ್ಷವರದಂತೆ ಅರ್ಧಂಬರ್ಧ ಯೋಜನೆಗಳು ಪೂರ್ಣಗೊಂಡಿವೆ.
ಅಪೂರ್ಣ ಯೋಜನೆಗಳು ಪೂರ್ಣಗೊಳ್ಳಲು ಹಣ ಬೇಕು. ಹಣ ಬಿಡುಗಡೆಮಾಡಿಸಲು ಶ್ರಮಿಸಲು ರೇವಣ್ಣ ಯಾಗಲಿ, ಕುಮಾರಸ್ವಾಮಿ ಯಾಗಲಿ ಅಧಿಕಾರದಲ್ಲಿಲ್ಲ. ಹಣ ಬಿಡುಗಡೆ ಯಾಗುವುದೆಂತು ? ಯೋಜನೆಗಳು ಪೂರ್ಣಗೊಳ್ಳುವುದೆಂತು ? ಎನ್ನುವುದು ಹಾಸನ ನಾಗರಿಕರ ಪ್ರಶ್ನೆ.
ಹಾಸನ ಜಿಲ್ಲೆಯನ್ನು ಮೊದಲನೆಯ ಸ್ಥಾನಕ್ಕೆ ತರುವುದಾಗಿ ಆಶ್ವಾಸನೆ ನೀಡಿದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಸನಕ್ಕೆ 36 ಸಾರಿ ಭೇಟಿ ನೀಡಿದ್ದರು.
ಇದಕ್ಕೆ ಪ್ರತಿಪಕ್ಷಗಳ ಮುಖಂಡರ ಆಕ್ಷೇಪಣೆ ವ್ಯಕ್ತವಾಯಿತು. ಅಗತ್ಯವಿದ್ದರೆ 60 ಸಾರಿ ಭೇಟಿ ನೀಡುತ್ತೇನೆ ಎಂದು ಅವರು ಎದುರುತ್ತರ ನೀಡಿ ಅವರ ಬಾಯಿ ಮುಚ್ಚಿಸಿದರು.
ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕಾಗಿ ಹಲವಾರು ಕಟ್ಟಡಗಳು ಒಡೆದುಹಾಕಲಾಗಿದೆ. ರಸ್ತೆಗಳನ್ನು ಅಗೆಯಲಾಗಿದೆ. ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಪಶು ವೈದ್ಯಕೀಯ ಕಾಲೇಜು ಹೀಗೆ ಹಲವಾರು ಯೋಜನೆಗಳು ಅಪೂರ್ಣವಾಗಿದ್ದರಿಂದ ಜನರಿಗೆ ತೊಂದರೆಯಾಗಿದೆ.
ಈಗ ಆಗಿರುವ ಕಾಮಗಾರಿಗೆಗಳಿಗೆ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿ ಯಾಗಿಲ್ಲ. ಇಂಥ ಪರಿಸ್ಥಿತಿಯಿಂದ ಹಾಸನ ನಾಗರಿಕರು ಗೊಂದಲದಲ್ಲಿದ್ದಾರೆ.
|