ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತವಿದ್ದರೂ ಸರ್ಕಾರದ ಆಡಳಿತ ನಡೆಸುವಲ್ಲಿ ಯಾವುದೇ ಕುಂದು ಬರದಂತೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ನಿರ್ಧರಿಸಿದ್ದಾರೆ.
ಇಡೀ ರಾಜ್ಯದ ಅಧಿಕಾರ ರಾಜ್ಯಪಾಲರಲ್ಲಿ ಕೇಂದ್ರೀಕೃತವಾಗಿದೆ.ಆಡಳಿತ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಅವರಿಗಾಗಿ ತಾತ್ಕಾಲಿಕ ಕಚೇರಿಯನ್ನು ಒದಗಿಸಲಾಗಿದೆ.
ಕೆಲಸದ ಎಲ್ಲಾ ದಿನಗಳಲ್ಲು ಅವರು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಈ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕುಮಾರಸ್ವಾಮಿಯವರಿಂದ ಜನಪ್ರಿಯವಾಗಿದ್ದ ಜನತಾ ದರ್ಶನವನ್ನು ರಾಜ್ಯಪಾಲರು ಮುಂದುವರೆಸಲು ಬಯಸಿದ್ದಾರೆ.
ಸೋಮವಾರ, ಬುಧವಾರ ಮತ್ತು ಶುಕ್ರವಾರಳಂದು ಠಾಕೂರ್ ಅಪರಾಹ್ನ 12.30 ರಿಂದ ಮಧ್ಯಾಹ್ನ 1.30ರ ವರೆಗೆ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ.
ಗುರುವಾರ ಬೆಳಗ್ಗೆ ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಡಿಜಿಪಿ ಮತ್ತು ಬೆಂಗಳುರು ಪೊಲೀಸ್ ಆಯುಕ್ತರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು.
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿಧನದಿಂದಾಗಿ ಆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
|