ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅವಕಾಶವಾದ ರಾಜಕಾರಣದಿಂದ ರಾಷ್ಟ್ರಪತಿ ಅಡಳಿತ
ಸ್ವಾರ್ಥಕ್ಕೆ ಬಿದ್ದ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಾದ ಜೆಡಿಎಸ್ ಹಾಗೂ ಬೆಜೆಪಿ ಪಕ್ಷಗಳ ಅವಕಾಶವಾದದಿಂದ ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತ ಹೇರುವಂತಾಗಿದೆ ಎಂದು ಸಿಪಿಎಂ ಆರೋಪಿಸಿದೆ.

ಕೋಮುವಾದಿ ಶಕ್ತಿಗಳನ್ನು ದೂರವಿಡುವ ಘೋಷಣೆಯೊಂದಿಗೆ ಚುನಾವಣೆಯಲ್ಲಿ ಜಯಗಳಿಸಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿ ಸರ್ಕಾರದ ರಚನೆಗೆ ಕಾರಣರಾದ ಜೆಡಿಎಸ್ ವರಿಷ್ಠ ದೇವೇಗೌಡರು ಕಾಂಗ್ರೆಸ್ ಮೇಲೆ ಅತಿರೇಕದ ಆಪಾದನೆಗಳನ್ನು ಹೊರಿಸಿ ಧರ್ಮಸಿಂಗ್ ನೇತೃತ್ವದ ಸರ್ಕಾರವನ್ನು ಉರುಳಿಸಿದರು ಎಂದು ಸಿಪಿಎಂ ಟೀಕಿಸಿದೆ.

ಕೋಮುವಾದಿ ಪಕ್ಷ ಎಂದು ಹಿಯಾಳಿಸುತ್ತಿದ್ದ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಿದ ದೇವೇಗೌಡರು ಆ ಪಕ್ಷಕ್ಕೆ ನೀಡಿದ ಭರವಸೆಯನ್ನು ಈಡೇರಿಸದೆ ಬಿಜೆಪಿ ನೇತೃತ್ವದ ಸರ್ಕಾರದ ರಚನೆಗೆ ಅವಕಾಶ ನೀಡದೆ ಸರ್ಕಾರವನ್ನು ಪೂರ್ವ ನಿಯೋಜಿತ ಸಂಚಿನಂತೆ ಉರುಳಿಸಿದರು.

ಇಂಥ ಸನ್ನಿವೇಶದಲ್ಲಿ ಬಿಜೆಪಿಗೆ ಮುಂದಿನ ಅಧಿಕಾರ ನೀಡಿದ್ದರೆ ಕರ್ನಾಟಕ್ ರಾಜ್ಯದ ಜನತೆಯ ಪಾಲಿಗೆ ವಿನಾಶಕಾರಿ ಆಗುತ್ತಿತ್ತು ಎಂದು ಸಿಪಿಎಂ ಮುಖವಾಣಿ ಪೀಪಲ್ಸ್ ಡೆಮಾಕ್ರಸಿ ಹೇಳಿದೆ.

ರಾಜ್ಯ ವಿಧಾನಸಭೆಗೆ ಶೀಘ್ರ ಚುನಾವಣೆ ನಡೆಸಿ ಹೊಸ ಜನಾದೇಶ ಪಡೆಯುವುದೊಂದೇ ಜನತಂತ್ರ ಕಾಪಾಡಲು ಲಭ್ಯವಿರುವ ಏಕೈಕ ಮಾರ್ಗ ಎಂದು ಅದು ಹೇಳಿದೆ.
ಮತ್ತಷ್ಟು
ಈಗ ರಾಜ್ಯದಲ್ಲಿ ರಾಜ್ಯಪಾಲರ ದರ್ಬಾರು
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ನಿಧನ
ರಾಜ್ಯಪಾಲರಿಂದ ಜಂಬೂಸವಾರಿ ಉದ್ಘಾಟನೆ
ಜ್ಯೋತಿಷ್ಯಕ್ಕೆ ಶರಣಾದ ಗೌಡರ ಕುಟುಂಬ
ದೇವೇಗೌಡರ ತವರೂರಿನಲ್ಲಿ ಆತಂಕ
ರಾಷ್ಟ್ರಪತಿ ಅಡಳಿತ ಜಾರಿ:ವದಂತಿಗಳ ಕಾರುಬಾರು