ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಎಸ್‌ನೊಂದಿಗೆ ಮರುಮೈತ್ರಿ ಇಲ್ಲ: ಯಡಿಯೂರಪ್ಪ
ಬಾಹ್ಯ ಬೆಂಬಲವೂ ಸೇರಿದಂತೆ ಯಾವುದೇ ಕಾರಣಕ್ಕೂ ಜೆಡಿಎಸ್ ಜತೆ ಮರು ಮರು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಜೆಡಿಎಸ್ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಸಿದ್ಧ ಎಂದು ನೀಡಿದ ಹೇಳಿಕೆಯಿಂದ ಉಂಟಾದ ಗೊಂದಲಕ್ಕೆ ಅವರು ಬೆಂಗಳೂರಿನಲ್ಲಿ ಸ್ಷಷ್ಟನೆ ನೀಡಿದರು.

ಕೇಂದ್ರ ಸರ್ಕಾರ ರಾಜ್ಯದಲ್ಲಿ ಅನೈತಿಕ ರಾಜಕಾರಣಕ್ಕೆ ಅವಕಾಶ ನೀಡದೆ, ಕೂಡಲೇ ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ತಾವು ಎಂದೂ ಅಧಿಕಾರದ ಬೆನ್ನು ಹತ್ತಿ ಹೋದವರಲ್ಲ. ಹೋಗುವುದೂ ಇಲ್ಲ. ಜೆಡಿಎಸ್ ವಿರುದ್ಧ ಈಗಾಗಲೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಿಶ್ವಾಸ ದ್ರೋಹ ಆಗಿರುವ ಬಗ್ಗೆ ಜನರಿಗೆ ವಿವರಣೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ನಡುವೆ ಚಲನಚಿತ್ರ ನಿರ್ದೇಶಕ ಹಾಗೂ ನಟಿ ಶೃತಿ ಅವರ ಪತಿ ಎಸ್.ಮಹೇಂದರ್ ಅವರು ಬಿಜಿಪಿಗೆ ಸೇರ್ಪಡೆಯಾಗಿದ್ದಾರೆ.

ತಾವು ಕಳೆದ 10 ವರ್ಷಗಳಿಂದ ರಾಜಕೀಯ ಪ್ರವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಬಿಜೆಪಿಗೆ ಬೆಂಬಲವಾಗಿ ಕೆಲಸಮಾಡಿರುವುದಾಗಿ ಅವರು ತಿಳಿಸಿದರು. ಬರುವ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದಾರೆ.
ಮತ್ತಷ್ಟು
ಮಂಗಳೂರು-ಬೆಂಗಳೂರು ರೈಲು ಸಂಚಾರ
ಬೊಮ್ಮಾಯಿಗೆ ಅಂತಿಮ ನಮನ: ಗಣ್ಯರ ಕಂಬನಿ
ಅವಕಾಶವಾದ ರಾಜಕಾರಣದಿಂದ ರಾಷ್ಟ್ರಪತಿ ಅಡಳಿತ
ಈಗ ರಾಜ್ಯದಲ್ಲಿ ರಾಜ್ಯಪಾಲರ ದರ್ಬಾರು
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ನಿಧನ
ರಾಜ್ಯಪಾಲರಿಂದ ಜಂಬೂಸವಾರಿ ಉದ್ಘಾಟನೆ