ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಎಸ್‌ಗೆ ಬಿಜೆಪಿ ಸೆಡ್ಡು: ಗಣಿ ರೆಡ್ಡಿ ಅಮಾನತು ವಾಪಸ್
ಲಂಚ ಆರೋಪ ಸಂಬಂಧ ಕುಮಾರಸ್ವಾಮಿ ಅವರನ್ನು ಕಾಡಿದ ಬಳ್ಳಾರಿಯ ಗಾಲಿ ಜನಾರ್ದನ ರೆಡ್ಡಿ ಅವರ ಅಮಾನತ್ತನ್ನು ಬಿಜೆಪಿ ವಾಪಸ್ ಪಡೆಯುವುದರೊಂದಿಗೆ ಜೆಡಿಎಸ್ ಮೇಲಿನ ಸೇಡು ತೀರಿಸಿಕೊಂಡಿದೆ.

ತಮ್ಮ ಮೇಲೆ ಲಂಚ ಆರೋಪ ಮಾಡಿದ ಗಣಿ ರೆಡ್ಡಿಯ ವಿರುದ್ಧ ಬಿಜೆಪಿ ನಾಯಕರು ಕ್ರಮ ಕೈಗೊಂಡಿಲ್ಲ ಎಂದು ಹುದ್ದೆಯಲ್ಲಿರುವವರೆಗೆ ಟೀಕಿಸುತ್ತಿದ್ದ ಕುಮಾರಸ್ವಾಮಿ ಅವರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ.

ಇತ್ತೀಚಿಗೆ ನಡೆದ ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಬಲ ಪೈಪೋಟಿ ನಡುವೆ ಬಿಜೆಪಿ ಬಾವುಟ ಹಾರಿಸಿದ್ದು ರೆಡ್ಡಿ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಪಕ್ಷದ ಹೈಕಮಾಂಡ್ ಸಹಾ ಪರಿಗಣಿಸಿದೆ.

ಪಾಲಿಕೆಯ 35 ಸ್ಥಾನಗಳ ಪೈಕಿ ಬಿಜೆಪಿ 30 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ರೆಡ್ಡಿ ಅಮಾನತು ರದ್ದುಗೊಳ್ಳುವುದರೊಂದಿಗೆ ಬಿಜೆಪಿ ಜೆಡಿಎಸ್‌ನೊಂದಿಗೆ ಮರು ಮೈತ್ರಿಗೆ ಸಿದ್ಧವಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಬಳ್ಳಾರಿ ಜೆಲ್ಲೆಗೆ ಮಾತ್ರ ಸೀಮಿತವಾಗಿದ್ದ ಗಾಲಿ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಸಹೋದರರ ಪವರ್ ಪಾಲಿಟಿಕ್ಸ್ ಕಳೆದ 15 ತಿಂಗಳುಗಳ ಕಾಲ ರಾಜ್ಯ ಸರ್ಕಾರವನ್ನೇ ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿತ್ತು.

ಈ ಮೂವರ ಖಾಸಾ ದೋಸ್ತಿ ಸಚಿವರಾಗಿದ್ದ ಶ್ರೀರಾಮುಲು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲಗುಂಪಾಗಿಸಿ ಕಮಲವನ್ನು ಅರಳುವಂತೆ ಮಾಡಿದ್ದು ಈ ರೆಡ್ಡಿ ಬ್ರದರ್ಸ್.
ಮತ್ತಷ್ಟು
ಜೆಡಿಎಸ್‌ನೊಂದಿಗೆ ಮರುಮೈತ್ರಿ ಇಲ್ಲ: ಯಡಿಯೂರಪ್ಪ
ಮಂಗಳೂರು-ಬೆಂಗಳೂರು ರೈಲು ಸಂಚಾರ
ಬೊಮ್ಮಾಯಿಗೆ ಅಂತಿಮ ನಮನ: ಗಣ್ಯರ ಕಂಬನಿ
ಅವಕಾಶವಾದ ರಾಜಕಾರಣದಿಂದ ರಾಷ್ಟ್ರಪತಿ ಅಡಳಿತ
ಈಗ ರಾಜ್ಯದಲ್ಲಿ ರಾಜ್ಯಪಾಲರ ದರ್ಬಾರು
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ನಿಧನ