ಬುಧವಾರ ರಾತ್ರಿ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಹುಬ್ಬಳ್ಳಿ ಸಮೀಪದ ಅಮರಗೋಳದ ತೋಟದಲ್ಲಿ ನೆರವೇರಿತು.
ಬೆಂಗಳೂರಿನಿಂದ ಗುರುವಾರ ಪಾರ್ಥಿವ ಶರೀರವನ್ನು ಬೊಮ್ಮಾಯಿ ಅವರ ಸ್ವಗ್ರಾಮ ಕುಂದುಗೋಳಕ್ಕೆ ಒಯ್ಯಲಾಗಿತ್ತು. ಮೇರು ವ್ಯಕ್ತಿತ್ವದ ಹಿರಿಯ ರಾಜಕಾರಣಿಯನ್ನು ಕಳೆದು ಕೊಂಡ ಧಾರವಾಡ ಜಿಲ್ಲೆಯ ಜನರು ಅವರ ಅಗಲುವಿಕೆಗೆ ಕಂಬನಿ ಮಿಡಿದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸ್ಬೆರಿದಂತೆ ಸುತ್ತಮುತ್ತಲಿನ ತಾಲೂಕಿನಲ್ಲಿ ವಕೀಲರಾಗಿ ಪ್ರಖ್ಯಾತಿ ಪಡೆದವರು ಬೊಮ್ಮಾಯಿ.
ಹುಬ್ಬಳ್ಳಿಯ ಆದರ್ಶನಗರದಲ್ಲಿರುವ ಅವರ ನಿವಾಸದ ಮಾಳಿಗೆ ಕಟ್ಟಡದ ಮೇಲೆ ಎಸ್.ಆರ್. ಬೊಮ್ಮಾಯಿ ವಕೀಲರು ಎಂಬ ನೀಲಿ ಬಣ್ಣದ ಫಲಕ ಈಗಲೂ ತೂಗುತ್ತಿದೆ.
ಎಸ್.ಆರ್. ಬೊಮ್ಮಾಯಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅವರ ಸಂಬಂಧಿಗಳು, ಆಪ್ತರು, ಅಭಿಮಾನಿಗಳು ಪಾಲ್ಗೊಂಡು ಕಂಬನಿ ಮಿಡಿದಿದ್ದಾರೆ.
ಬೊಮ್ಮಾಯಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಮಹಾರಾಷ್ಟ್ತ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರೂ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಅಗಲಿದ ನಾಯಕನಿಗೆ ಶ್ರದ್ದಾಂಜಲಿ ಅರ್ಪಿಸಿದರು.
|