ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದಸರಾ: ಒಡೆಯರ್ ಖಾಸಗಿ ದರ್ಬಾರ್ ಆರಂಭ
ಮೈಸೂರು ರಾಜ ವಂಶಸ್ಥರ ಖಾಸಗಿ ದರ್ಬಾರ್ ಸಹಾ ಶುಕ್ರವಾರ ಆರಂಭವಾಗಿದೆ. ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪೂಜಾ ವಿಧಿಗಳನ್ನು ನೆರವೇರಿಸಿ ಸಿಂಹಾಸನವನ್ನು ಅಲಂಕರಿಸಿದರು.

ಇದೇರೀತಿ ಅವರು ಪ್ರತಿದಿನ ಸಂಜೆ ರಾಜಪೋಷಾಕು ಧರಿಸಿ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸುವರು. ಇದೇ ಸಂದರ್ಭದಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತವೆ.

ಅ. 20ರಂದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಆಯುಧ ಪೂಜೆ ನಡೆಸುವ ಅವರು ವಿಜಯದಶಮಿಯಂದು ಬೆಳ್ಳಿ ರಥದಲ್ಲಿ ಕುಳಿತು ರಾಜಪರಿವಾರದೊಂದಿಗೆ ಅರಮನೆ ಆವರಣದಲ್ಲಿ ಮೆರವಣಿಗೆ ನಡೆಸುವರು.

ಅರಮನೆ ಕೋಟೆಯಲ್ಲಿರುವ ದೇವಾಲಯಕ್ಕೆ ಪೂಜೆ ಸಲ್ಲಿಸುವರು. ರಾಜಪೋಷಾಕು ಧರಿಸುವ ಅವರು ಪಟ್ಟದ ಆನೆ, ಪಟ್ಟದ ಕುದುರ, ಅರಮನೆ ಗೌರವ ನಿಶಾನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುವರು. ಇದಕ್ಕು ಮೊದಲು ಸಂಪ್ರದಾಯದಂತೆ ಜಟ್ಟಿ ಕಾಳಗ ನಡೆಯುತ್ತದೆ.

ಅರಮನೆಯಿಂದ ಹೊರಗೆ ನಡೆಯುವ ದಸರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದ್ದರೆ ಅರಮನೆ ಒಳಗೆ ನಡೆಯುವ ಖಾಸಗಿ ದರ್ಬಾರ್ಗೆ ಒಡೆಯರ್ ಅವರು ಕುಟುಂಬ ವರ್ಗದವರು, ಬಂಧುಗಳು, ಆಪ್ತರು ಹಾಗೂ ರಾಜ ವಂಶಸ್ಥರಿಂದ ಪಾಸ್ ಪಡೆದವರಿಗೆ ಮಾತ್ರ ಪ್ರವೇಶವಿದೆ.
ಮತ್ತಷ್ಟು
ಸರಕಾರಿ ಗೌರವ, ಬೊಮ್ಮಾಯಿ ಅಂತ್ಯಕ್ರಿಯೆ
ಮಹಿಮಾ ಪಟೇಲ್ 'ಸುವರ್ಣ ಯುಗ' ಆರಂಭ
ಮೈಸೂರು: ನಾಡಹಬ್ಬ ದಸರಾ ಆರಂಭ
ಜೆಡಿಎಸ್‌ಗೆ ಬಿಜೆಪಿ ಸೆಡ್ಡು: ಗಣಿ ರೆಡ್ಡಿ ಅಮಾನತು ವಾಪಸ್
ಜೆಡಿಎಸ್‌ನೊಂದಿಗೆ ಮರುಮೈತ್ರಿ ಇಲ್ಲ: ಯಡಿಯೂರಪ್ಪ
ಮಂಗಳೂರು-ಬೆಂಗಳೂರು ರೈಲು ಸಂಚಾರ