ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ತೆರಿಗೆ ದಾಳಿ: ಲೆಕ್ಕಪತ್ರವಿಲ್ಲದ 200 ಕೋಟಿ ರೂ. ಪತ್ತೆ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ ದಾಳಿಯಲ್ಲಿ ಇಲಾಖೆಗೆ 200 ಕೋಟಿ ರೂ.ಗಳ ಲೆಕ್ಕ ದೊರೆಯದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಇಂಥ ಭಾರಿ ಪ್ರಮಾಣದಲ್ಲಿ ಹಣ ದೊರೆತಿರುವುದು ಇದೇ ಮೊದಲು.

ಖ್ಯಾತ ಡೆವಲಪರ್ ಗಳಾದ ಮಾನ್ಯತಾ ಡೆವಲಪರ್ಸ್ ಮತ್ತು ರಿಲಿಯಬಲ್ ಡೆವಲಪರ್ಸ್ ಕಚೇರಿಗಳು ಹಾಗೂ ಮಾಲೀಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು.

ನಗರದ ರೇಷ್ಮೆ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿನೆಡಸಿ ಅಪಾರ ಸಂಪತ್ತನ್ನು ವಶಪಡಿಸಿಕೊಂಡಿದ್ದರು. ಖ್ಯಾತ ರೇಷ್ಮೆ ಸೀರೆಗಳ ವ್ಯಾಪಾರ ಸಂಸ್ಥೆಯಾದ ಸುದರ್ಶನ್ ಸಿಲ್ಕ್ಸ್ ಮೇಲೆ ದಾಳಿನಡೆಸಲಾಗಿದೆ ಎಂದು ಆದಾಯತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಅದರೆ ಸುದರ್ಶನ್ ಸಿಲ್ಕ್ಸ್ ಸಿಬ್ಬಂದಿ ಅದನ್ನು ಅಲ್ಲಗಳೆದಿದ್ದಾರೆ. ಚಿಕ್ಕಪೇಟೆಯಲ್ಲಿರುವ ಸುದರ್ಶನ್ ಸಿಲ್ಕ್ಸ್‌ನ ಅಂಗಡಿಯನ್ನು ಮುಚ್ಚಲಾಗಿದೆ.
ಮತ್ತಷ್ಟು
ದಸರಾ: ಒಡೆಯರ್ ಖಾಸಗಿ ದರ್ಬಾರ್ ಆರಂಭ
ಸರಕಾರಿ ಗೌರವ, ಬೊಮ್ಮಾಯಿ ಅಂತ್ಯಕ್ರಿಯೆ
ಮಹಿಮಾ ಪಟೇಲ್ 'ಸುವರ್ಣ ಯುಗ' ಆರಂಭ
ಮೈಸೂರು: ನಾಡಹಬ್ಬ ದಸರಾ ಆರಂಭ
ಜೆಡಿಎಸ್‌ಗೆ ಬಿಜೆಪಿ ಸೆಡ್ಡು: ಗಣಿ ರೆಡ್ಡಿ ಅಮಾನತು ವಾಪಸ್
ಜೆಡಿಎಸ್‌ನೊಂದಿಗೆ ಮರುಮೈತ್ರಿ ಇಲ್ಲ: ಯಡಿಯೂರಪ್ಪ