ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಗ್ಗಂಟಾದ ಇಎಸ್ಐ ಅಧೀಕ್ಷಕಿ ಆತ್ಮಹತ್ಯೆ ಪ್ರಕರಣ
ನಗರದ ಇಂದಿರಾನಗರದಲ್ಲಿರುವ ಇಎಸ್ಐ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಧಿಕಾ (50) ಹೆಚ್ಚು ಪ್ರಮಾಣದಲ್ಲಿ ಅರಿವಳಿಕೆ ಮದ್ದನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಗರ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.

ನಗರದ ಬೊಮ್ಮನಹಳ್ಳಿ ಮಸೀದಿ ರಸ್ತೆ ನಿವಾಸಿ ಹಾಗೂ ಬೀದರ್‌ನ ಭೀಮರಾಯನಗುಡಿಯಲ್ಲಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಚಿಜಿನಿಯರ್ ಆಗಿರುವ ರಾಮಕೃಷ್ಣ ಎಂಬುವರ ಪತ್ನಿ ಡಾ. ರಾಧಿಕಾ.

ಬುಧವಾರ ಮಹಾಲಯ ಅಮಾವಾಸ್ಯೆ ಇದ್ದಿದ್ದರಿಂದ ಆಸ್ಪತ್ರೆಯ ಆಡಳಿತ ಸಿಬ್ಬಂದಿಗೆ ರಜೆ ಇತ್ತು. ಹೀಗಿದ್ದರೂ ಡಾ. ರಾಧಿಕಾ ಅವರು ಮೀಟಿಂಗ್ ನೆಪ ಹೇಳಿ ಆಸ್ಪತ್ರೆಗೆ ಬಂದಿದ್ದಾರೆ. ಪ್ರತಿನಿತ್ಯ ಕಾರಿನಲ್ಲಿ ಬರುತ್ತಿದ್ದ ರಾಧಿಕಾ ಬುಧವಾರ ಆಟೋದಲ್ಲಿ ಬಂದಿದ್ದಾರೆ.

ಬೆಳಗ್ಗೆ 11 ಗಂಟೆಗೆ ಬಂದ ಅವರು ಎರಡನೇ ಮಹಡಿಯಲ್ಲಿರುವ ತಮ್ಮ ವಿಶ್ರಾಂತಿ ಕೊಠಡಿಗ ತೆರಳಿ, ಚಿಲಕ ಹಾಕಿಕೊಂಡು ನೋವು ನಿವಾರಕ ಔಷಧಿಯನ್ನು ಇಂಜೆಕ್ಷನ್ ಮೂಲಕ ತೆಗೆದುಕೊಂಡು ನಿದ್ರೆಗೆ ಶರಣಾಗಿದ್ದಾರೆ.

ತಾಯಿ ಕಾಣೆಯಾಗಿದ್ದರಿಂದ ಅವರ ಪುತ್ರ ರಕ್ಷಿತ್ ಸಂಜೆ ಆಸ್ಪತ್ರೆಗೆ ಬಂದು ಎಲ್ಲ ಕಡೆ ಹುಡುಕಿದರೂ ರಾಧಿಕಾ ಅವರ ಪತ್ತೆ ಯಾಗಿಲ್ಲ. ಈ ಬಗ್ಗೆ ಮಡಿವಾಳ ಪೊಲೀಸರಿಗೆ ದೂರು ನೀಡಲಾಗಿದೆ. ಗುರುವಾರ ಬೆಳಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಇವರ ದೇಹ ಪತ್ತೆ ಯಾಗಿದೆ.

ಸಾವಿನ ಪತ್ರ ಬರೆದಿಟ್ಟಿರುವ ಡಾ. ರಾಧಿಕಾ ಮಾನಸಿಕ ಒತ್ತಡದಿಂದ ಈ ಕೃತ್ಯಕ್ಕೆ ಮುಂದಾಗಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ತಿಳಿಸಿದ್ದಾರೆ.

ಆದರೆ ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳ ಕಿರುಕುಳದಿಂದ ತನ್ನ ಪತ್ನಿ ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಅವರ ಪತಿ ರಾಮಕೃಷ್ಣ ಆರೋಪಿಸಿದ್ದಾರೆ.
ಮತ್ತಷ್ಟು
ತೆರಿಗೆ ದಾಳಿ: ಲೆಕ್ಕಪತ್ರವಿಲ್ಲದ 200 ಕೋಟಿ ರೂ. ಪತ್ತೆ
ದಸರಾ: ಒಡೆಯರ್ ಖಾಸಗಿ ದರ್ಬಾರ್ ಆರಂಭ
ಸರಕಾರಿ ಗೌರವ, ಬೊಮ್ಮಾಯಿ ಅಂತ್ಯಕ್ರಿಯೆ
ಮಹಿಮಾ ಪಟೇಲ್ 'ಸುವರ್ಣ ಯುಗ' ಆರಂಭ
ಮೈಸೂರು: ನಾಡಹಬ್ಬ ದಸರಾ ಆರಂಭ
ಜೆಡಿಎಸ್‌ಗೆ ಬಿಜೆಪಿ ಸೆಡ್ಡು: ಗಣಿ ರೆಡ್ಡಿ ಅಮಾನತು ವಾಪಸ್