ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಷ್ಟ್ರಪತಿಗೆ ಮಾಹಿತಿ:ರಾಜ್ಯಪಾಲ
ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳು ಕಸರತ್ತು ಮಾಡುತ್ತಿವೆಯೆಂಬ ವರದಿಗಳ ಹಿನ್ನೆಲೆಯಲ್ಲಿ , ಯಾವುದೇ ಬೆಳವಣಿಗೆ ಸಂಭವಿಸಿದರೆ ತಾವು ರಾಷ್ಟ್ರಪತಿಗೆ ಮಾಹಿತಿ ನೀಡುವುದಾಗಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ತಿಳಿಸಿದ್ದಾರೆ.

ಅಗತ್ಯ ಸಂಖ್ಯಾಬಲದೊಂದಿಗೆ ಯಾವುದೇ ರಾಜಕೀಯ ಪಕ್ಷ ನಿಮ್ಮನ್ನು ಸಂಪರ್ಕಿಸಿದರೆ ಅವರ ಮನವಿಯನ್ನು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ, ಮುಂದೆ ಏನಾಗುತ್ತದೆಂದು ತಾವು ಹೇಳಲಾರೆ ಎಂದು ನುಡಿದರು.

ರಾಜ್ಯದ ಮತ್ತು ರಾಜ್ಯದ ಜನರ ಸರ್ವಾಂಗೀಣ ಅಭಿವೃದ್ಧಿ ತಮ್ಮ ಕಾಳಜಿಯಾಗಿದ್ದು, ಇದರಲ್ಲಿ ಅಧಿಕಾರಿಗಳು ಸಹಕರಿಸುತ್ತಾರೆಂದು ಹೇಳಿದರು.ಕಾನೂನು ಸುವ್ಯವಸ್ಥೆ, ಆರೋಗ್ಯ, ಇಂಧನ, ಕೃಷಿ ಮತ್ತು ನೀರಾವರಿ ಸೇರಿದಂತೆ 12 ಪ್ರಮುಖ ಇಲಾಖೆಗಳಲ್ಲಿ ಕೆಲಸಗಳ ಪ್ರಗತಿಯನ್ನು ಅವರು ಪರಾಮರ್ಶಿಸಿದರು.

ತಮ್ಮ ಚೊಚ್ಚಲ ಜನತಾದರ್ಶನ ಆರಂಭಿಸಿದ ಅವರು ವಿಧಾನಸೌಧದ ತಮ್ಮ ಅಧಿಕೃತ ಕಚೇರಿಯಲ್ಲಿ ಸಾಲುನಿಂತ ಜನರನ್ನು ಭೇಟಿ ಮಾಡಿದರು. ರಾಜ್ಯಪಾಲರು ಸೋಮವಾರ, ಬುಧವಾರ, ಶುಕ್ರವಾರ 12.30ರಿಂದ 1.30ರ ನಡುವೆ ಜನತಾ ದರ್ಶನ ಕಾರ್ಯಕ್ರಮ ನಡೆಸಲಿದ್ದಾರೆ.
ಮತ್ತಷ್ಟು
ಕಗ್ಗಂಟಾದ ಇಎಸ್ಐ ಅಧೀಕ್ಷಕಿ ಆತ್ಮಹತ್ಯೆ ಪ್ರಕರಣ
ತೆರಿಗೆ ದಾಳಿ: ಲೆಕ್ಕಪತ್ರವಿಲ್ಲದ 200 ಕೋಟಿ ರೂ. ಪತ್ತೆ
ದಸರಾ: ಒಡೆಯರ್ ಖಾಸಗಿ ದರ್ಬಾರ್ ಆರಂಭ
ಸರಕಾರಿ ಗೌರವ, ಬೊಮ್ಮಾಯಿ ಅಂತ್ಯಕ್ರಿಯೆ
ಮಹಿಮಾ ಪಟೇಲ್ 'ಸುವರ್ಣ ಯುಗ' ಆರಂಭ
ಮೈಸೂರು: ನಾಡಹಬ್ಬ ದಸರಾ ಆರಂಭ