ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದೇಶದ ಬ್ರಹತ್ ಪುಸ್ತಕೋತ್ಸವ
ಇದು ದೇಶದ ಎರಡನೇ ದೊಡ್ಡ ಪುಸ್ತಕ ಜಾತ್ರೆ. ಅತೀ ದೊಡ್ಡ ಪುಸ್ತಕ ಮಾರಾಟ ಮೇಳ ನಡೆಯುವುದು ಪ್ರತಿವರ್ಷ ಕೋಲ್ಕತ್ತಾದಲ್ಲಿ. ಅದು ಬಿಟ್ಟರೆ ಇಷ್ಟು ದೊಡ್ಡ ಪುಸ್ತಕ ಮಾರಾಟ ಮೇಳ ನಡೆಯುವುದು ಬೆಂಗಳೂರಿನಲ್ಲೇ.

ಹತ್ತು ದಿನಗಳ ಕಾಲ ನಡೆಯುವ ಈ ಪುಸ್ತಕ ಮೇಳದಲ್ಲಿ ಅಂದಾಜು 20 ಕೋಟಿ ರೂಪಾಯಿಗಳ ಪುಸ್ತಕ ಮಾರಾಟ ವಹಿವಾಟು ನಡೆಯುತ್ತದೆ. ಒಂದು ಮಿಲಿಯನ್‌ಗೂ ಹೆಚ್ಚು ಪುಸ್ತಕಗಳು ಒಂದೇ ಸೂರಿನಡಿ ಲಭ್ಯವಿರುವುದು ಈ ಪುಸ್ತಕೋತ್ಸವದ ವಿಶೇಷತೆ.

ಈ ಬಾರಿ 300ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿದ್ದು ಅವುಗಳಲ್ಲಿ 50 ಪುಸ್ತಕ ಮಳಿಗೆಗಳು ಕನ್ನಡ ಪುಸ್ತಕಗಳದ್ದು. ಕನ್ನಡ ಪುಸ್ತಕಗಳಲ್ಲದೆ ಆಂಗ್ಲ, ಹಿಂದಿ, ತಮಿಳು, ತೆಲುಗು ಹೀಗೆ ವಿವಿಧ ಭಾಷೆಯ ಪುಸ್ತಕಗಳು ಒಂದೆಡೆ ಲಭ್ಯವಿರುವುದರಿಂದ ಲಕ್ಷಾಂತರ ಪುಸ್ತಕ ಪ್ರೇಮಿಗಳಿಗೆ ಇದು ವರದಾನವಾಗಲಿದೆ.
ಮತ್ತಷ್ಟು
ಬೆಂಗಳೂರು ಪುಸ್ತಕೋತ್ಸವ ಆರಂಭ
ರಾಷ್ಟ್ರಪತಿಗೆ ಮಾಹಿತಿ:ರಾಜ್ಯಪಾಲ
ಕಗ್ಗಂಟಾದ ಇಎಸ್ಐ ಅಧೀಕ್ಷಕಿ ಆತ್ಮಹತ್ಯೆ ಪ್ರಕರಣ
ತೆರಿಗೆ ದಾಳಿ: ಲೆಕ್ಕಪತ್ರವಿಲ್ಲದ 200 ಕೋಟಿ ರೂ. ಪತ್ತೆ
ದಸರಾ: ಒಡೆಯರ್ ಖಾಸಗಿ ದರ್ಬಾರ್ ಆರಂಭ
ಸರಕಾರಿ ಗೌರವ, ಬೊಮ್ಮಾಯಿ ಅಂತ್ಯಕ್ರಿಯೆ