ಪುಸ್ತಕೋತ್ಸವ ನಡೆಸಲು ಕೋಲ್ಕತ್ತಾ ಪುಸ್ತಕೋತ್ಸವವೇ ಸ್ಪೂರ್ತಿ ಎನ್ನುತ್ತಾರೆ ಪುಸ್ತಕೋತ್ಸವದ ಕಾರ್ಯಕ್ರಮ ನಿರ್ದೇಶಕ ರಘುರಾಂ.
ಕಳೆದ ನಾಲ್ಕು ವರ್ಷಗಳ ಹಿಂದೆ ಕೋಲ್ಕತ್ತಾ ಪುಸ್ತಕೋತ್ಸವಕ್ಕೆ ಹೋಗಿದ್ದೆ. ಇಡೀ ಪ್ರದೇಶದ ಜನತೆಯೇ ಅದೊಂದು ತಮ್ಮ ರಾಜ್ಯದ ಹಬ್ಬ ಎಂಬಂತೆ ಸಂಭ್ರಮಿಸುವುದನ್ನು ನೋಡಿದೆ. ರಾಜ್ಯದಲ್ಲೂ ಇದನ್ನು ಯಾಕೆ ಪ್ರಾರಂಭಿಸಬಾರದು ಎಂಬ ಬಗ್ಗೆ ಬೆಂಗಳೂರು ಪುಸ್ತಕ ಮಾರಾಟಗಾರರ ಸಂಘದೊಂದಿಗೆ ಚರ್ಚೆ ನಡೆಸಿದೆ. ಅವರ ಪೂರಕ ಪ್ರೋತ್ಸಾಹ ಸಿಕ್ಕಿತು. ಅದರ ಪರಿಣಾಮವಾಗಿ ಈ ಬಾರಿ ಐದನೇ ವರ್ಷಕ್ಕೆ ಪುಸ್ತಕೋತ್ಸವ ಕಾಲಿಡುತ್ತಿದೆ ಎಂದು ರಘುರಾಂ ಹೇಳಿದರು.
ಜನರಲ್ಲಿ ಓದುವ ಅಭಿರುಚಿಯನ್ನು ಬೆಳೆಸುವಲ್ಲಿ ಪುಸ್ತಕೋತ್ಸವ ಯಶಸ್ವಿಯಾಗಿದೆ. ಮಹಿಳೆಯರು, ಮಕ್ಕಳು, ಯುವಜನತೆ ದೊಡ್ಡ ಪ್ರಮಾಣದಲ್ಲಿ ಈ ಪುಸ್ತಕೋತ್ಸವದಲ್ಲಿ ಭಾಗವಹಿಸುತ್ತಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಬೆಂಗಳೂರು ಪುಸ್ತಕೋತ್ಸವ 2007ರ ಅಧ್ಯಕ್ಷ ಬಲರಾಂ ಸಾಧ್ವಾನಿ, ಸಂಯೋಜಕ ಜೆ.ಉಲ್ಲಾಸ್ ಕುಮಾರ್, ಅವರ ನೆರವಿನೊಂದಿಗೆ ಓದುಗರ ಹಾಗೂ ಮಾರಾಟಗಾರರ ದೊಡ್ಡ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ.
ಮುಂದಿನ ವರ್ಷ ಅಂತಾರಾಷ್ಟ್ರೀಯ ಪುಸ್ತಕೋತ್ಸವ ಆಯೋಜಿಸುವುದು ನಮ್ಮ ಗುರಿ ಎಂಬುದು ಅವರ ಅನಿಸಿಕೆ.
|