ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಚಿವ ಹುದ್ದೆ ಅಂಗಲಾಚಿದ್ದ ಯಡಿಯೂರಪ್ಪ
ಬಿಜೆಪಿ ಪಕ್ಷದಲ್ಲಿನ ತಮ್ಮವಿರುದ್ಧ ಪಿತೂರಿನಿಂದ ಸಾಕಾಗಿ ಹೊಗಿದೆ, ಪಕ್ಷ ಬಿಟ್ಟು ಬರ್ತಿನಿ ನನಗೊಂದು ಸಚಿವ ಪದವಿ ನೀಡಿ ಎಂದು ಅಂಗಲಾಚಿದ ಯಡಿಯೂರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದಲ್ಲದೆ ಅವರ ಪಕ್ಷದವರಿಗೂ ಸಚಿವ ಹುದ್ದೆ ನೀಡಿ 20 ತಿಂಗಳು ಅಧಿಕಾರದ ರುಚಿ ತೋರಿಸಿದ್ದೇ ಹೆಚ್ಚು ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ ದತ್ತ ವ್ಯಂಗವಾಡಿದ್ದಾರೆ.

ಯಡಿಯೂರಪ್ಪ ಅವರು ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ವಿರುದ್ಧ ಮಾಡಿದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪ ಅವರ ಪಕ್ಷದಲ್ಲೇ ಹಿತ ಶತ್ರುಗಳಿದ್ದಾರೆ, ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಿವಿಮಾತು ಹೇಳಿದರು.

20 ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರದ ರಚನೆ ಕಾಲದಲ್ಲಿ ಉಭಯ ಪಕ್ಷಗಳು ನಡುವೆ ಒಪ್ಪಂದವೇರ್ಪಟ್ಟನಂತರ ನಡೆದ ಘಟನೆಗಳ ಮೂಲಕ ತಮ್ಮಪಕ್ಷದ ಮುಖಂಡರು ಸಾಕಷ್ಟು ನೊವುಂಡಿದ್ದಾರೆ. ಹಾಗಾಗಿ ಒಪ್ಪಂದದಂತೆ ನಡೆಯಲು ಸಾಧ್ಯವಾಗಿಲ್ಲ. ಈಗಲೂ ಆ ಪಕ್ಷಕ್ಕೆ ನಷ್ಟವೇನೂ ಆಗಿಲ್ಲ.

20 ತಿಂಗಳು ಅಧಿಕಾರ ಮೆರೆದಿದ್ದಾರೆ ಎಂದು ನುಡಿದರು. ಶಾಸಕರ ಸಂಖ್ಯಾ ಬಲದಲ್ಲಿ ತಮ್ಮದು ಮೂರನೇ ಸ್ಥಾನದಲ್ಲಿದ್ದರೂ ತೃತೀಯ ಶಕ್ತಿಯಾಗಿರುವ ತಮ್ಮ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬಹುಮತ ನೀಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮತ್ತಷ್ಟು
ಅದ್ದೂರಿ ದಸರಾ: ರಂಗೇರುತ್ತಿರುವ ಮೈಸೂರು
ಜೆಡಿಎಸ್ ಶಾಸಕರಿಂದ ಒಡಕು : ಯಡಿಯೂರಪ್ಪ
ಕೋಲ್ಕತ್ತ ಪುಸ್ತಕೋತ್ಸವವೇ ಸ್ಫೂರ್ತಿ:ರಘುರಾಂ
ದೇಶದ ಬ್ರಹತ್ ಪುಸ್ತಕೋತ್ಸವ
ಬೆಂಗಳೂರು ಪುಸ್ತಕೋತ್ಸವ ಆರಂಭ
ರಾಷ್ಟ್ರಪತಿಗೆ ಮಾಹಿತಿ:ರಾಜ್ಯಪಾಲ