ಮುಂಬರುವ ಡಿ. 12ರಿಂದ 15ರ ವರೆಗೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆಯಲಿರುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ.
ರಾಜ್ಯದಲ್ಲಿ ರಾಜಕೀಯ ಪರಿಸ್ಥತಿ ಬದಲಾಗಿದ್ದರೂ ಸಮ್ಮೇಳನದ ಸಿದ್ಧತೆಗೆ ಕುಂದುಂಟಾಗಿಲ್ಲ. ಹಿಂದಿನ ಸಮ್ಮೇಳನಗಳ ಕುಂದುಕೊರತೆ, ನ್ಯೂನತೆಗಳನ್ನು ತಿದ್ದಿ ತೀಡಿ ಒಪ್ಪ ಓರಣ ಮಾಡುವ ಪ್ರಯತ್ನ ಇಲ್ಲಿ ನಡೆದಿದೆ. ಇದೊಂದು ಮಾದರಿ
ಸಮ್ಮೇಳನದಂತೆ ನಡೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದಾಗಿ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಯು. ಚಂದ್ರಶೇಖರ ಹೊಳ್ಳ ತಿಳಿಸಿದ್ದಾರೆ.
ಸಮ್ಮೇಳನ ದಿನಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸ ಯೋಜನೆ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಕಿರು ಪುಸ್ತಕವನ್ನು ಮುದ್ರಿಸಲು ನಿರ್ಧರಿಸಲಾಗಿದೆ.
ಸಮ್ಮೇಳನದ ಅಂಗವಾಗಿ 74 ಹೊಸ ಪುಸ್ತಗಳು ಬಿಡುಗಡೆಯಾಗಲಿವೆ. ಹಿರಿಯ ಸಾಹಿತಿಗಳೊಂದಿಗೆ ಸಾಮಾನ್ಯರು ಸಂವಾದ ನಡೆಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಶುಚಿ ರುಚಿಯಾದ ಹಿತಮಿತವಾದ ಸರಳ ಭೋಜನ ವ್ಯವಸ್ಥೆ ಮಾಡಲಾಗಿದೆ. ಭೋಜನಕ್ಕೆ ಜಿಲ್ಲೆಯ ಹಲವು ದೇವಾಲಯಗಳಿಂದ ವಸ್ತು ರೂಪದಲ್ಲಿ ಸಹಾಯ ಪಡೆಯಲಾಗುತ್ತಿದೆ.
|