ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಧರ್ಮಯಾತ್ರೆಗೆ ಪ್ರತಿಯಾಗಿ ಜೆಡಿಎಸ್ ಅರಿವು ಯಾತ್ರೆ
ತಮಗೆ ಅಧಿಕಾರವನ್ನು ಹಸ್ತಾಂತರಿಸದ ಜೆಡಿಎಸ್ ವಂಚನೆ ಬಗ್ಗೆ ಜನರಿಗೆ ತಿಳಿಸಲು ಬಿಜೆಪಿ ಧರ್ಮಯಾತ್ರೆಯನ್ನು ಕೈಗೆತ್ತಿಕೊಂಡಿದ್ದರೆ, ಅದರ ಮಾಜಿ ಮಿತ್ರ ಪಕ್ಷ ಜೆಡಿಎಸ್ ರಾಜ್ಯಾದ್ಯಂತ ಅರಿವು ಯಾತ್ರೆಯನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ಅರಿವು ಯಾತ್ರೆಯ ಮೂಲಕ ಬಿಜೆಪಿಯ ಮರ್ಮವನ್ನು ಬಯಲಿಗೆಳೆದು ಜನರಿಗೆ ತಿಳಿಸುವುದಾಗಿ ಯುವ ಜೆಡಿಎಸ್ ಅಧ್ಯಕ್ಷ ಅರವಿಂದ ಎಂ. ದಳವಾಯಿ ತಿಳಿಸಿದ್ದಾರೆ.

ಪಕ್ಷದ ರಾಷ್ಟ್ತ್ರಿಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಹಿರಿಯ ಮುಖಂಡ ಎಂ.ಪಿ. ಪ್ರಕಾಶ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅರಿವು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಲೋಕಸಭೆಯ ಮಧ್ಯಂತರ ಚುನಾವಣೆ ಸಂಬಂಧ ಬಿಜೆಪಿ ರಾಮಸೇತು ವಿಷಯವನ್ನು ಹೇಳುತ್ತಿದೆ. ವಿಧಾನಸಭೆ ಮಧ್ಯಂತರ ಚುನಾವಣೆಯನ್ನು ಗಮನಿಸಿ ಬಾಬಾ ಬುಡನ್‌ಗಿರಿಯನ್ನು ದತ್ತಪೀಠವನ್ನಾಗಿ ಪರಿವರ್ತಿಸಬೇಕು ಎಂದು ಹೇಳುತ್ತಿದೆ ಎಂದು ಟೀಕಿಸಿದರು.

ಇದು ಬಿಜೆಪಿ ನಾಯಕರ ಬೌದ್ದಿಕ ಮತ್ತು ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಹಿಯಾಳಿಸಿದರು.
ಮತ್ತಷ್ಟು
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ
ಸಚಿವ ಹುದ್ದೆ ಅಂಗಲಾಚಿದ್ದ ಯಡಿಯೂರಪ್ಪ
ಅದ್ದೂರಿ ದಸರಾ: ರಂಗೇರುತ್ತಿರುವ ಮೈಸೂರು
ಜೆಡಿಎಸ್ ಶಾಸಕರಿಂದ ಒಡಕು : ಯಡಿಯೂರಪ್ಪ
ಕೋಲ್ಕತ್ತ ಪುಸ್ತಕೋತ್ಸವವೇ ಸ್ಫೂರ್ತಿ:ರಘುರಾಂ
ದೇಶದ ಬ್ರಹತ್ ಪುಸ್ತಕೋತ್ಸವ