ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೀಸಲು ನಿಗದಿ ಪ್ರಕ್ರಿಯೆ ಆರಂಭ
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ರಾಜ್ಯಪಾಲ ರಾಮೇಶ್ವರ್ ಅವರು ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ನಿಗದಿ ಪಡಿಸಲಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲು ನಿಯಮಗಳಿಗೆ ಸಂಬಂಧಿಸಿದಂತೆ ಈಗಾಗಲೇ ತಿದ್ದುಪಡಿ ತಂದು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಇದಕ್ಕೆ ಈ ತಿಂಗಳ 15ರ ವರೆಗೆ ಅವಕಾಶವಿದ್ದು, ನಂತರ ಹತ್ತು ದಿನಗಳ ಒಳಗೆ ಮೀಸಲಾತಿ ನಿಗದಿ ಪಡಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಅಧಿಕಾರ ಹಸ್ತಾಂತರದಲ್ಲಿ ಆದ ಗೊಂದಲದಲ್ಲಿ ಸರ್ಕಾರ ಪತನಗೊಂಡಿದ್ದು ಒಂದು ರೀತಿಯಲ್ಲಿ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಉತ್ತಮ ಬೆಳವಣಿಗೆ ಎಂದು ಜನರು ಭಾವಿಸುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಪಡಿಸುವಲ್ಲಿ ಸಾಮಾನ್ಯವಾಗಿ ಆಡಳಿತಾ ರೂಢ ಪಕ್ಷಗಳ ಪ್ರಭಾವ ಕೆಲಸ ಮಾಡುತ್ತದೆ.

ಅಧಿಕಾರದಲ್ಲಿರುವ ಪಕ್ಷದ ಮುಖಂಡರು ಸರ್ಕಾರದ ಮೇಲೆ ಪ್ರಭಾವ ಬೀರಿ ಸ್ವಲ್ಪ ಅನುಕೂಲವಾಗುವಂತೆ ಮಿಸಲಾತಿ ನಿಗದಿಪಡಿಸುವುದು ನಡೆದುಬಂದ ದಾರಿ.

ಸರ್ಕಾರದಲ್ಲಿ ಯಾವ ಪಕ್ಷವೂ ಇಲ್ಲದಿರುವುದರಿಂದ ನಿರಾತಂಕವಾಗಿ ಮೀಸಲಾತಿ ನಿಗದಿ ಪಡಿಸಬಹುದಾಗಿದೆ.

ರಾಜ್ಯದ 44 ನಗರಸಭೆ, 94 ಪುರಸಭೆ ಹಾಗೂ 68 ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಗೊಳ್ಳಬೇಕಾಗಿದೆ.
ಮತ್ತಷ್ಟು
ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲ:ಖರ್ಗೆ
ಧರ್ಮಯಾತ್ರೆಗೆ ಪ್ರತಿಯಾಗಿ ಜೆಡಿಎಸ್ ಅರಿವು ಯಾತ್ರೆ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ
ಸಚಿವ ಹುದ್ದೆ ಅಂಗಲಾಚಿದ್ದ ಯಡಿಯೂರಪ್ಪ
ಅದ್ದೂರಿ ದಸರಾ: ರಂಗೇರುತ್ತಿರುವ ಮೈಸೂರು
ಜೆಡಿಎಸ್ ಶಾಸಕರಿಂದ ಒಡಕು : ಯಡಿಯೂರಪ್ಪ