ಸಮ್ಮಿಶ್ರ ಸರ್ಕಾರದ ಅಧಿಕಾರವನ್ನು ಬಿಜೆಪಿಗೆ ಏಕೆ ನೀಡಲಿಲ್ಲ ಎಂದು ಜನರಿಗೆ ವಿವರಿಸುವ ಉದ್ದೇಶದಿಂದ ಜೆಡಿಎಸ್ ಮುಖಂಡರು ಸಹಾ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ.
ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಇತರೆ ಮುಖಂಡರು ಜನರಿಗೆ ಬಿಜೆಪಿ ತಮಗೆ ಯಾವರೀತಿ ತೊಂದರೆ ಕೊಟ್ಟರು ಎಂದು ವಿವರಿಸಲು ಮುಂದಾಗಿದ್ದಾರೆ.
ಈಗಾಗಲೇ ಬಿಜೆಪಿ ಮುಖಂಡರು ಧರ್ಮಯಾತ್ರೆಯಲ್ಲಿ ನಿರತರಾಗಿದ್ದು ಜೆಡಿಎಸ್ ಮುಖಂಡರ ಕುತಂತ್ರಗಳ ಬಗ್ಗೆ ಪ್ರಚಾರಮಾಡುವಲ್ಲಿ ತೊಡಗಿದ್ದಾರೆ.
ತಮಗೆ ಆಗಿರುವ ಅನ್ಯಾಯದಿಂದ ಜನರ ಅನುಕಂಪದೊರೆಯಲಿದೆ ಎಂಬುದು ಬಿಜೆಪಿಯ ಉದ್ದೇಶ. ಆದರೆ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆದರೆ ಮಾತ್ರ ಆ ಅನುಕಂಪ ದೊರೆಯಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇರುವುದರಿಂದ ಬಿಜೆಪಿಗೆ ಅಧಿಕಾರ ಸೂತ್ರ ಹಿಡಿಯಲು ಅವಕಾಶ ನೀಡುವುದಿಲ್ಲ ಎಂಬುದು ಖಚಿತ.
ಹಾಗಾಗಿ ಇನ್ನು ಆರು ತಿಂಗಳು ವಿಧಾನಸಭೆಗೆ ಚುನಾವಣೆ ನಡೆಯುವುದು ಅನುಮಾನವೇ. ಜನರ ನೆನಪು ಬಹುಬೇಗ ಅಳಿಸಿಹೋಗುತ್ತದೆ, ಅದರಿಂದ ಈ ಧರ್ಮಯಾತ್ರೆಯಿಂದ ಬಿಜೆಪಿಗೆ ಏನೇನೂ ಲಾಭವಾಗದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಈ ಸಮಯದಲ್ಲಿ ತಾವು ಜನರಿಗೆ ಬಿಜೆಪಿಯ ಕೋಮುವಾದ ಭಾವನೆಯಿಂದ ರಾಜ್ಯದ ಜನರಿಗೆ ಆಗಿರುವ ನಷ್ಟವೇನು ಎಂದು ವಿವರಿಸುವುದಾಗಿ ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ.
|