ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗರಿಗೆದರಿದ ದತ್ತಪೀಠ
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರ ಉರುಳುತ್ತಿದ್ದಂತೆ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ದತ್ತಪೀಠ ವಿವಾದ ಗರಿಗೆದರುತ್ತಿದೆ. ಈ ತಿಂಗಳ 20ರಿಂದ 26ವರೆಗೆ ದತ್ತಮಾಲಾ ಅಭಿಯಾನ ಹಾಗೂ ಅದರ ಅಂಗವಾಗಿ ಶೋಭಾಯಾತ್ರೆಗಳು ನಡೆಯಲಿವೆ.

ಇದೊಂದು ಸೂಕ್ತ ಸಮಯ ಎಂದು ಭಾವಿಸಿದ ಬಿಜೆಪಿ ಮುಖಂಡರು ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಬಾಬುಡನ್ಗಿರಿಯನ್ನು ದತ್ತಪೀಠವನ್ನಾಗಿ ಪರಿವರ್ತಿಸಲಾಗುವುದು ಎಂದು ಭರವಸೆ ನೀಡುತ್ತಿದ್ದಾರೆ.

ದತ್ತಪೀಠದ ಹೋರಾಟದಲ್ಲಿ ತೊಡಗಿಸಿಕೊಂಡ ರಾಜಕೀಯ ಮುಖಂಡರು 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯ ಗಳಿಸಿದರು. ಇದರ ಲಾಭ ಪಡೆದ ಬಿಜೆಪಿಗೆ ಅಧಿಕಾರ ನೀಡದಿರಲು ಇದೂ ಒಂದು ಕಾರಣ ಎಂದು ಜೆಡಿಎಸ್ ಹೇಳುತ್ತಿದೆ.

ಬಿಜೆಪಿಗೆ ರಾಜ್ಯದಲ್ಲಿ ದತ್ತಪೀಠ ಹೊರತುಪಡಿಸಿ ಇನ್ನಾವುದೇ ಪ್ರಮುಖ ವಿಷಯ ಇಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಈ ವಿವಾದವನ್ನು ಬಳಸಿಕೊಳ್ಳಲಿದೆ.

ಬಾಬಾಬುಡನ್‌ಗಿರಿಯನ್ನು ದತ್ತಪೀಠ ಎಂದು ಪರಿವರ್ತಿಸುತ್ತೇವೆ ಎಂದು ಬಿಜೆಪಿ ಮುಖಂಡ ಅನಂತಕುಮಾರ್ ಅವರು ಹೇಳಿರುವುದಕ್ಕೆ ಜಿಲ್ಲೆಯ ಜನರು ಹಾಗೂ ಆರ್ಎಸ್ಎಸ್ ವಿರೋಧ ವ್ಯಕ್ತಪಡಿಸಿದೆ. ಇಂಥ ಹೇಳಿಕೆಯ ಅಗತ್ಯ ಈಗ ಇರಲಿಲ್ಲ ಎಂಬುದು ಅವರ ವಾದ.
ಮತ್ತಷ್ಟು
ಜೆಡಿಎಸ್ ಮುಖಂಡರ ರಾಜ್ಯ ಪ್ರವಾಸ
ಮೀಸಲು ನಿಗದಿ ಪ್ರಕ್ರಿಯೆ ಆರಂಭ
ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲ:ಖರ್ಗೆ
ಧರ್ಮಯಾತ್ರೆಗೆ ಪ್ರತಿಯಾಗಿ ಜೆಡಿಎಸ್ ಅರಿವು ಯಾತ್ರೆ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ
ಸಚಿವ ಹುದ್ದೆ ಅಂಗಲಾಚಿದ್ದ ಯಡಿಯೂರಪ್ಪ