ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆ
ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಈ ತಿಂಗಳ 18ರಂದು ಬೆಳಗ್ಗೆ ನಡೆಯಲಿರುವ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಕ್ಕೆ ಕಾವೇರಿ ಸಂಕ್ರಮಣಕ್ಕಾಗಿ ಸಾವಿರಾರು ಮಂದಿ ಯಾತ್ರೀಕರು ಬರುವ ನಿರೀಕ್ಷೆ ಇದ್ದು, ಅವರಿಗಾಗಿ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಹಾಗೂ ತಲಕಾವೇರಿ ಅಭಿವೃದ್ದಿ ಸಮಿತಿ ಶ್ರಮಿಸುತ್ತಿದೆ.

ತಲಕಾವೇರಿ ನೀರಾವರಿ ನಿಗಮದ ವತಿಯಿಂದ ಕೈಗಂಡಿರುವ ಅಭಿವೃದ್ದಿ ಕಾರ್ಯಗಳಿಂದಾಗಿ ತೀರ್ಥೋದ್ಭವ ಕಣಗಳನ್ನು ವೀಕ್ಷಿಸಲು ಸಹಸ್ರಾರು ಭಕ್ತರಿಗೆ ಸೂಕ್ತ ಸ್ಥಳಾವಕಾಶ ಲಭ್ಯವಿದೆ.

ಭಾಗಮಂಡಲವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ.ಆರ್. ನಿರಂಜನ್ ಹೇಳಿದ್ದಾರೆ.
ಮತ್ತಷ್ಟು
ಜೆಡಿಎಸ್ ತ್ಯಜಿಸುವವರ ಸಂಖ್ಯೆ ಹೆಚ್ಚಳ
ಗರಿಗೆದರಿದ ದತ್ತಪೀಠ
ಜೆಡಿಎಸ್ ಮುಖಂಡರ ರಾಜ್ಯ ಪ್ರವಾಸ
ಮೀಸಲು ನಿಗದಿ ಪ್ರಕ್ರಿಯೆ ಆರಂಭ
ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲ:ಖರ್ಗೆ
ಧರ್ಮಯಾತ್ರೆಗೆ ಪ್ರತಿಯಾಗಿ ಜೆಡಿಎಸ್ ಅರಿವು ಯಾತ್ರೆ