ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನೇತ್ರಾಣಿಯಲ್ಲಿ ಸಮರಾಭ್ಯಾಸ: ಆತಂಕ
ಜೀವ ವೈವಿಧ್ಯತೆಗಳ ಅಗರ, ಹವಳಗಳ ಕಣಜ ಭಟ್ಕಳ ಸಮೀಪದ ನೇತ್ರಾಣಿ ದ್ವೀಪದಲ್ಲಿ ಜೀವ ವೈವಿಧ್ಯತಾ ಪಾರ್ಕ್ ಸ್ಥಾಪನೆಯ ಪ್ರಯತ್ನಗಳು ನಡೆಯುತ್ತಿರುವಾಗಲೇ ಭಾರತೀಯ ನೌಕಾಪಡೆ ಅ. 19ರಂದು ಬಾಂಬ್, ಗುಂಡುಗಳು ಸುರಿಮಲೆ ನಡೆಸಿ ಸಮರಾಭ್ಯಾಸ ನಡೆಸುವುದಾಗಿ ಪ್ರಕಟಿಸಿದೆ.

ನೇತ್ರಾಣಿ ಮತ್ತೆ ತಲ್ಲಣಗೊಳ್ಳಲಿದೆ. ನಿತ್ರಾಣವಾಗಲಿದೆ. ನೌಕಾಪಡೆ ನೇತ್ರಾಣಿಯ ಮೇಲೆ ಇದೇ ರೀತಿ ದಾಳಿ ಮುಂದುವರೆಸಿದಲ್ಲಿ ಅಲ್ಲಿ ಜೀವ ವೈವಿಧ್ಯತಾ ಪಾರ್ಕ್ ಸ್ಥಾಪಿಸುವಾಗ ಜೀವಿಗಳನ್ನು ಎರವಲು ಪಡೆಯುವ ಪರಿಸ್ಥಿತಿ ತಲೆದೋರುವ ಆತಂಕ ಎದುರಾಗಿದೆ.

ನೇತ್ರಾಣಿಯಲ್ಲಿ ಯಾವುದೇ ಕಾರಣಕ್ಕೂ ಯುದ್ಧ ತಾಲೀಮು ನಡೆಸಬಾರದು ಎಂದು ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.

ಜೀವ ವೈವಿಧ್ಯತಾ ಪಾರ್ಕ್ ಸ್ಥಾಪಿಸಬೇಕೆಂಬುದು ಅವರ ಒತ್ತಾಯ. ಕಳದ ವರ್ಷ ರಾಜ್ಯ ಜೀವ ವೈವಿಧ್ಯತಾ ಮಂಡಳಿ ಕಾರ್ಯದರ್ಶಿ ತಿವಾರಿ ಮತ್ತಿತರ ಅಧಿಕಾರಿಗಳು ನೇತ್ರಾಣಿಗೆ ಭೇಟಿ ನೀಡಿ, ಪರೀಶೀಲಿಸಿ, ನೇತ್ರಾಣಿಯಲ್ಲಿ ಜೀವ ವೈವಿಧ್ಯತಾ ಪಾರ್ಕ್ ಸ್ಥಾಪನೆಗೆ ಶಿಫಾರಸು ಮಾಡಲಾಗುವುದು ಎಂದು ಪ್ರಕಟಿಸಿದ್ದರು.

ಈ ಪ್ರಕ್ರಿಯೆ ನೆಡಯುತ್ತಿರುವಾಗಲೇ ಮತ್ತೆ ನೌಕಾಪಡೆ ನೇತ್ರಾಣಿಯಲ್ಲಿ ಕೋಲಾಹಲ ಎಬ್ಬಿಸಲು ಸನ್ನದ್ಧವಾಗಿದೆ. ಇದನ್ನು ತಡೆಯುವ ಅವಕಾಶ ಇಲ್ಲವಾಗಿದೆ.

ಮತ್ತಷ್ಟು
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆ
ಜೆಡಿಎಸ್ ತ್ಯಜಿಸುವವರ ಸಂಖ್ಯೆ ಹೆಚ್ಚಳ
ಗರಿಗೆದರಿದ ದತ್ತಪೀಠ
ಜೆಡಿಎಸ್ ಮುಖಂಡರ ರಾಜ್ಯ ಪ್ರವಾಸ
ಮೀಸಲು ನಿಗದಿ ಪ್ರಕ್ರಿಯೆ ಆರಂಭ
ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲ:ಖರ್ಗೆ