ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ತಂದೆ ಪಾದಯಾತ್ರೆಯ ಹಾದಿಯಲ್ಲಿ ಕುಮಾರ
ಹಿಂದೊಮ್ಮೆ ಕಾಂಗ್ರೆಸ್ ಸಚಿವರಾಗಿದ್ದ ದಿ.ಎಸ್. ರಮೇಶ್ ಚುನಾವಣಾ ಸಂದರ್ಭದಲ್ಲಿ ಕುಣಿಗಲ್‌ನಲ್ಲಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ ಎಂಬ ಆರೋಪವಿತ್ತು.

ಅವರ ವಿರುದ್ಧ ಅಂದಿನ ಸರ್ಕಾರ ಯಾವ ಕ್ರಮವೂ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ಕೇವಲ ಒಂದುಬಾರಿ ಮಾತ್ರ ಸಚಿವರಾಗಿ ರಾಜಕೀಯದಲ್ಲಿ ತಳ ಊರಿದ್ದ ದೇವೇಗೌಡರು ಬೆಂಗಳೂರಿನಿಂದ ಕುಣಿಗಲ್‌ವರೆಗೆ ಪಾದ ಯಾತ್ರೆ ನಡೆಸಿದ್ದರು.

ನೀರಾ ಚಳವಳಿ ನಡೆಯುತ್ತಿದ್ದಾಗ ರಾಮನಗರ ಬಳಿಯ ಹಳ್ಳಿಯೊಂದರಲ್ಲಿ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ರೈತರು ಮೃತ ಪಟ್ಟಿದ್ದರು.

ಅದರ ವಿರುದ್ಧ ದೇವೇಗೌಡರು ಮತ್ತೊಮ್ಮೆ ಪಾದಯಾತ್ರೆ ಕೈಗೊಂಡಿದ್ದರು. ಹೀಗೆ ರಾಜಕಾರಣಿಗಳು ತಮ್ಮವರ್ಚಸ್ಸು ಬೆಳೆಸಿಕೊಳ್ಳಲು ಪಾದಯಾತ್ರೆ ನಡೆಸುತ್ತಾರೆ.

ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ವಿರುದ್ಧದ ವಚನ ಭ್ರಷ್ಟ ಆರೋಪದಿಂದ ಕುಗ್ಗಿರುವ ವರ್ಚಸ್ಸನ್ನು ಬೆಳೆಸಿಕೊಳ್ಳಲು ಪಾದಯಾತ್ರೆ ನಡೆಸಲು ಉದ್ದೇಶಿಸಿ ತಂದೆ ಸಾಗಿದ ಹಾದಿಯನ್ನೇ ಹಿಡಿದಿದ್ದಾರೆ.

ಅದಲ್ಲದೆ ವಚನಭ್ರಷ್ಟ ಅಂಶ ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಧರ್ಮಯಾತ್ರೆ ಪ್ರವಾಸಕ್ಕೆ ತಡೆ ಹಾಕಲು ಪಾದಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಕೈಗೊಳ್ಳುವುದು ಆ ಯಾತ್ರೆಯ ಗುರಿ.

ಇದು ಒಂದು ಸಾವಿರ ಕಿ.ಮೀ. ದೂರದ ಹಾದಿ. ಬಸವ ಕಲ್ಯಾಣದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ಈ ಪಾದಯಾತ್ರೆ ನಡೆಯಲಿದೆ.

ನವೆಂಬರ್‌ನಲ್ಲಿ ನಡೆಯಲಿರುವ ಈ ಪಾದಯಾತ್ರೆಗೆ ಇನ್ನೂ ದಿನಾಂಕ ನಿಗದಿ ಯಾಗಿಲ್ಲ.
ಮತ್ತಷ್ಟು
ನೇತ್ರಾಣಿಯಲ್ಲಿ ಸಮರಾಭ್ಯಾಸ: ಆತಂಕ
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆ
ಜೆಡಿಎಸ್ ತ್ಯಜಿಸುವವರ ಸಂಖ್ಯೆ ಹೆಚ್ಚಳ
ಗರಿಗೆದರಿದ ದತ್ತಪೀಠ
ಜೆಡಿಎಸ್ ಮುಖಂಡರ ರಾಜ್ಯ ಪ್ರವಾಸ
ಮೀಸಲು ನಿಗದಿ ಪ್ರಕ್ರಿಯೆ ಆರಂಭ