ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಂಕೀರ್ತನಾ ಯಾತ್ರೆಗೆ ಅನುಮತಿ :ಸಭೆ
ದತ್ತಮಾಲೆ ಅಭಿಯಾನದ ಅಂಗವಾಗಿ ಚಿಕ್ಕ ಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆಗೆ ಅನುಮತಿ ನೀಡುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ವರೆಗೆ ಎರಡು ಬಾರಿ ಸಭೆಗಳು ನಡೆದಿವೆ.

ಅ. 24ರಂದು ಸಂಕೀರ್ತನ ಯಾತ್ರೆಗೆ ಅವಕಾಶ ನೀಡಬೇಕೆಂದು ಸಂಘ ಪರಿವಾರದ ಮುಖಂಡರು ಜಿಲ್ಲಾಧಿಕಾರಿಗಳ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ. ಅಚಿದು ನಗರದಲ್ಲಿ ಸಂತೆ ಇರುವ್ಯದರಿಂದ ಸಂಕೀರ್ತನಾ ಯಾತ್ರೆ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ.

ಅ.24 ಹಾಗೂ 25ರಂದು ಹೊರತುಪಡಿಸಿ ಬೇರೆ ದಿನ ನಡೆಸುವಂತೆ ಜಿಲ್ಲಾಡಳಿತ ತಿಳಿಸಿದಾಗ, ಸಂಘ ಪರಿವಾರದ ಮುಖಂಡರು ಅದನನು ಒಪ್ಪಲಿಲ್ಲ ಎಂದು ಹೇಳಲಾಗಿದೆ.

ದತ್ತಮಾಲೆ ಅಭಿಯಾನ ಅಂಗವಾಗಿ ಎಲ್ಲಾ ಕಾರ್ಯಕ್ರಮಗಳ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

ಈಗಾಗಲೇ ನಿಗದಿತ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. 24ರಂದೇ ಸಂಕೀರ್ತನಾಮ ಯಾತ್ರೆಗೆ ಅನುಮತಿ ನೀಡಬೇಕೆಂದು ಸಂಘ ಪರಿವಾರ ಮುಖಂಡರು ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ನೋಡೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ಅಂತಿಮವಾಗಿ ನಗರದಲ್ಲಿ ನಡೆಯಲಿರುವ ಸಂಕೀರ್ತನಾ ಯಾತ್ರೆಗೆ ಜಿಲ್ಲಾಡಳಿತದಿಂದ ಅನುಮತಿ ನೀಡುವ ಸಾಧ್ಯತೆ ಇದ್ದರೂ ದತ್ತಪೀಠದಲ್ಲಿ ಪೂಜೆಗೆ ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ.
ಮತ್ತಷ್ಟು
ತಂದೆ ಪಾದಯಾತ್ರೆಯ ಹಾದಿಯಲ್ಲಿ ಕುಮಾರ
ನೇತ್ರಾಣಿಯಲ್ಲಿ ಸಮರಾಭ್ಯಾಸ: ಆತಂಕ
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆ
ಜೆಡಿಎಸ್ ತ್ಯಜಿಸುವವರ ಸಂಖ್ಯೆ ಹೆಚ್ಚಳ
ಗರಿಗೆದರಿದ ದತ್ತಪೀಠ
ಜೆಡಿಎಸ್ ಮುಖಂಡರ ರಾಜ್ಯ ಪ್ರವಾಸ