ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಕ್ರೀಡಾಕೂಟ ಆರಂಭವಾಗಿದೆ. ಚಾಮುಂಡಿ ಕ್ರೀಡಾಂಗಣದಲ್ಲಿ ಬಿಲಿಯರ್ಡ್ ಚಾಂಪಿಯನ್ ಚಿತ್ರ ಮಗಿ ಮೈರಾಜ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಕ್ರೀಡಾಪಟುಗಳಾದ ವಿಕ್ರಮ್ ಹಾಗೂ ಕೃತ್ತಿಕಾ ಕ್ರೀಡಾ ಜ್ಯೌತಿಯನ್ನು ಹೊತ್ತು ತಂದರು. ಒಟ್ಟು ಇಪ್ಪತ್ತಕ್ಕೂ ಹೆಚ್ಚುಕ್ರೀಡೆಗಳು ಇಲ್ಲಿ ನಡೆಯಲಿವೆ. ಚಿಗುರು ಕವಿಗೋಷ್ಠಿ: ದಸರಾ ಅಂಗವಾಗಿ ಮಕ್ಕಳಿಗಾಗಿ ಆಯೋಜಿಸಿರುವ ಚಿಗುರು ಕವಿಗೋಷ್ಠಿ ಕಲಾಮಂದಿರದಲ್ಲಿ ಆರಂಭವಾಯಿತು.
ಒಟ್ಟು 40 ಕಿರಿಯ ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಎಲ್ಲ ಕವಿಗಳು ಕವನಗಳನ್ನು ವಾಚನ ಮಾಡಿದರು. ದಸರಾ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾಗಳಲ್ಲಿ ಸಾಂಸ್ಕ್ಕತಿಕ ರೂಪ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಿತು.
ಸೆನ್ಸಾರ್ ಮಂಡಳಿ ಸದಸ್ಯ ಚಂದ್ರಶೇಖರ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು.
|