ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಳೆ ಸಂತ್ರಸ್ತರಿಗೆ ದೊರೆಯದ ಪರಿಹಾರ
ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವು ದೊರಕಿಸಿಕೊಡುವಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರೂ ಒಟ್ಟು 13 ಜಿಲ್ಲೆಗಳ ಅತಿವೃಷ್ಟಿ ಸಂತ್ರಸ್ತರು ತ್ರಿಶಂಕು ಸ್ಥಿತಿ ತಲುಪಿದ್ದಾರೆ.

ರಾಜ್ಯ ಸರ್ಕಾರ ತನ್ನ ನಿಧಿಯಿಂದ ಮೃತರ ಕುಟುಂಬಗಳಿಗೆ ಮತ್ತು ಜಾನುವಾರುಗಳನ್ನು ಕಳೆದುಕೊಂಡವರಿಗೆ ಮಾತ್ರ ಪರಿಹಾರ ನೀಡಿ ಕೈತೊಳೆದುಕೊಂಡಿದೆ.

ಆಗಸ್ಟ್‌ನಲ್ಲಿ ಸುರಿದ ಭಾರಿಮಳೆಗೆ ತೊಂದರೆಗೀಡಾದವರಿಗೆ ಕೇಂದ್ರ ಸರ್ಕಾರ ಇನ್ನೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಮಳೆ-ಪ್ರವಾಹದ ಅನಾಹುತಕ್ಕೂ ಪರಿಹಾರ ನೀಡಿಲ್ಲ.

ಕೇಂದ್ರದ ಮುಂದೆ ರಾಜ್ಯ ಸರ್ಕಾರ ಇಟ್ಟಿರುವ ಒಟ್ಟು 5000 ಕೋಟಿ ರೂ. ಗಳಷ್ಟು ಪರಿಹಾರ ನೀಡಬೇಕು ಎಂದು ಪ್ರಸ್ತಾಪವಿಟ್ಟಿದೆ.

ಈಗ ಪರಿಹಾರ ಕೇಳಲು ಜನಪ್ರತಿನಿಧಿಗಳ ಸರ್ಕಾರವಿಲ್ಲ. ರಾಷ್ಟ್ತ್ರಪತಿ ಆಡಳಿತ ಕಾರಣ ಸದ್ಯಕ್ಕೆ ಪರಿಹಾರ ನೀರೀಕ್ಷಿಸುವಂತಿಲ್ಲ. ಮಳೆ ಪೀಡಿತ ಪ್ರದೇಶಗಳಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ತೆಗೆದಿಟ್ಟ 125 ಕೊಟಿ ರೂ. ಗಳಲ್ಲಿ ಪೂರ್ತಿ ಹಣ ಬಿಡುಗಡೆ ಯಾಗಿಲ್ಲ.

ಮಳಯಿಂದಾದ ನಷ್ಟವನ್ನು ಅಂದಾಜು ಮಾಡಲು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವೆ ರಾದಿಕಾ ಸೆಲ್ವಿ ಬಂದು ಹೋದರು. ಗೃಹ ಸಚಿವ ಶಿವರಾಜ್ ಪಾಟೀಲ್ ಬಂದು ಪರಿಹಾರ ನೀಡುವುದಾಗಿ ಭರವಸೆ ನೀಡಿ ಹೋದರು.

ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವೂ ಬಂದು ಹೋಯಿತು. ಆದರೆ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚುವ ಯಾವ ಲಕ್ಪ್ಷಣಗಳೂ ಕಾಣುತ್ತಿಲ್ಲ.
ಮತ್ತಷ್ಟು
ಮೈಸೂರು ದಸರೆ: ಕ್ರೀಡಾಕೂಟ, ಚಿಗುರು ಕವಿಗೋಷ್ಠಿ
ಸಂಕೀರ್ತನಾ ಯಾತ್ರೆಗೆ ಅನುಮತಿ :ಸಭೆ
ತಂದೆ ಪಾದಯಾತ್ರೆಯ ಹಾದಿಯಲ್ಲಿ ಕುಮಾರ
ನೇತ್ರಾಣಿಯಲ್ಲಿ ಸಮರಾಭ್ಯಾಸ: ಆತಂಕ
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆ
ಜೆಡಿಎಸ್ ತ್ಯಜಿಸುವವರ ಸಂಖ್ಯೆ ಹೆಚ್ಚಳ