ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ರಹಸ್ಯ ಮಾತುಕತೆ ಬಹಿರಂಗ: ದತ್ತಾ
ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್‌ ಸಿಂಗ್ ಹಾಗು ಜೆಡಿಎಸ್ ವರಿಷ್ಠ ದೇವೇಗೌಡರ ನಡುವೆ ರಾಜ್ಯದ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ನಡೆದಿರುವ ರಹಸ್ಯ ಮಾತುಕತೆ ಸಂಪೂರ್ಣ ವಿವರಗಳನ್ನು ಅ. 18ರಂದು ಮಾಧ್ಯಮಗಳ ಮೂಲಕ ರಾಜ್ಯದ ಜನತೆಗೆ ಬಹಿರಂಗಪಡಿಸುವುದಾಗಿ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ತಿಳಿಸಿದ್ದಾರೆ.

ಬಿಜೆಪಿಗೆ ಅಧಿಕಾರ ನೀಡುವುದಿಲ್ಲ ಎಂದೂ ಜೆಡಿಎಸ್ ಹೇಳಿಲ್ಲ. ಬೇಡವಾದ ವಿಚಾರಗಳಿಗೆ ಪ್ರಚಾರ ಕೊಟ್ಟು ಬಿಜೆಪಿ ಮುಖಂಡರು ಜೆಡಿಎಸ್‌ಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ ಎಂದು ಆಪಾದಿಸಿದರು.

ಜೆಡಿಎಸ್‌ಗೆ ಸೇರ್ಪಡೆಯಾಗುವುದಾಗಿ ಹಿಂದೆ ದೇವೇಗೌಡರಿಗೆ ಹೇಳಿದ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರಿಗೂ ಸಚಿವ ಹುದ್ದೆ ನೀಡುವಂತೆ ಅಂಗಲಾಚಿದ್ದರು ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಲು ಅವರ ಪಕ್ಷದ ಮುಖಂಡ ಅನಂತಕುಮಾರ್ ಕಾರಣ ಎಂದು ಆರೋಪಿಸಿದರು.

ಇಲ್ಲಸಲ್ಲದ ವಿಷಯಗಳನ್ನು ಹೇಳಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಜನರಲ್ಲಿ ಕೆಟ್ಟ ಭಾವನೆ ಮೂಡುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು
ಮಳೆ ಸಂತ್ರಸ್ತರಿಗೆ ದೊರೆಯದ ಪರಿಹಾರ
ಮೈಸೂರು ದಸರೆ: ಕ್ರೀಡಾಕೂಟ, ಚಿಗುರು ಕವಿಗೋಷ್ಠಿ
ಸಂಕೀರ್ತನಾ ಯಾತ್ರೆಗೆ ಅನುಮತಿ :ಸಭೆ
ತಂದೆ ಪಾದಯಾತ್ರೆಯ ಹಾದಿಯಲ್ಲಿ ಕುಮಾರ
ನೇತ್ರಾಣಿಯಲ್ಲಿ ಸಮರಾಭ್ಯಾಸ: ಆತಂಕ
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆ