ದುಷ್ಟ ಶಕ್ತಿಗಳನ್ನು ಹೊಡೆದೋಡಿಸಿ ಜೀವನದಲ್ಲಿ ಸಂತೋಷ ತರುವ ದುರ್ಗಾದೇವಿ ಬಂಗಾಳಿಯರಿಗೆ ಅಚ್ಚುಮೆಚ್ಚಿನ ದೇವತೆ. ದುರ್ಗಾದೇವಿಯ ಪೂಜೆ ಮಹಾಲಯ ಅಮಾವಾಸ್ಯೆಯ ದಿನದಿಂದಲೇ ಆರಂಭವಾಗಿದೆ.
ಬೆಂಗಳೂರಿನಲ್ಲಿ 2 ಲಕ್ಷ ಬಂಗಾಳಿ ಜನರು ಇದ್ದಾರೆ ಎಂದು ಅಂದಾಜು. ಅಲಸೂರಿನಲ್ಲಿ ಬಂಗಾಳಿ ಸಂಘವಿದೆ. ಸಂಘದ ವತಿಯಿಂದ ನಡೆಯುವ 58ನೇ ದುರ್ಗಾಮಾತೆ ಪ್ರಜೆ ಇದು ಎಂದು ಸಂಘದ ಅಧ್ಯಕ್ಷ ಅಚಿಂತ್ಯ ಲಾಲ್ರಾಯ್ ತಿಳಿಸಿದ್ದಾರೆ.
ಸಂಗೀತ, ನೃತ್ಯ ಹಾಗೂ ಸ್ತೋತ್ರದಿಂದ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ದುರ್ಗಾ ಮಾತೆ ಉತ್ಸವದಲ್ಲಿ ಸಮುದಾಯ ಭೋಜನ, ರಸಗುಲ್ಲಾ ಪ್ರಸಾದ, ಹಣ್ಣುಗಳು ಪ್ರಧಾನ ಪಾತ್ರ ವಹಿಸುತ್ತವೆ.
ಅಷ್ಟಮಿ ಮತ್ತು ನವಮಿ ನಡುವೆ ನಡೆಯುವ ಸಂಧಿ ಪೂಜ ಅತ್ಯಂತ ಮಹತ್ವದ್ದು. ದುರ್ಗಾ ಮಾತೆ ಉತ್ಸವಕ್ಕೆ ಬಂಗಾಳ ರಾಜ್ಯದಿಂದ ಕಲಾವಿದರನ್ನು ಕರೆತರಲಾಗುತ್ತದೆ.
ಕೋರಮಂಗಲದಲ್ಲಿರುವ ಸಾರಥಿ ಟ್ರಸ್ಟ್ ಸಹಾ ದುರ್ಗೆ ಉತ್ಸವವನ್ನು ಆಯೋಜಿಸುತ್ತಿದೆ. ಯಲಹಂಕದಲ್ಲೂ ಬಂಗಾಳಿ ಸಂಘಟನೆಯೊಂದಿದೆ.
ಜಾತಿ ಬೇಧವಿಲ್ಲದೆ ಎಲ್ಲ ಸಮುದಾಯದವರೂ ದುರ್ಗಾಮಾತೆ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.
|