ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಧರ್ಮದ ಹೆಸರಿನಲ್ಲಿ ಸಿಮ್‌ಗೆ ಜೆಹಾದ್ ಗುರಿ
ಕಾನೂನು ವಿರೋಧಿ ಚಟುವಟಿಕೆ (ತಡೆಯುವ) ಕಾಯ್ದೆ ಅಡಿ ನಿಷೇಧಿಸಲಾಗಿರುವ ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಆಂದೋಲನ (ಸಿಮಿ) ಇಸ್ಲಾಮಿಕ್ ವಿದ್ಯಾರ್ಥಿಗಳ ಧರ್ಮಪ್ರಚಾರ ಮಂಡಳಿ (ಸಿಮ್) ಎಂಬ ಹೆಸರಲ್ಲಿ ಸಂಘಟನೆಗೊಳ್ಳುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ.

ತಮ್ಮ ಮೂಲಭೂತ ವಾದವನ್ನು ಹೇರುವುದಕ್ಕೆ ಜನರನ್ನು ಆಯ್ದುಕೊಂಡು ಅವರನ್ನು ಜೆಹಾದ್ ಸಮರಕ್ಕೆ ಸಜ್ಜುಗೊಳಿಸುವುದು ಈ ಸಿಮ್ ಗುರಿ ಎಂದು ಬೇಹುಗಾರಿಕಾ ಸಂಸ್ಥೆಗಳು ಪತ್ತ ಹಚ್ಚಿವೆ.

ಉಗ್ರರ ಸಂಘಟನೆಗಳ ಜೊತೆ ಸಂಪರ್ಕವಿರುವ ಸಿಮ್ನ ಸದಸ್ಯರು ಕರ್ನಾಟಕದಲ್ಲೂ ಬೇರು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಬಿಜಾಪುರ, ಬೀದರ್, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿರುವ ಈ ಸದಸ್ಯರು ಕೋಮುಸಂಘರ್ಷಕ್ಕೆ ದಾರಿ ಮಾಡಿಕೊಡುವ ಪ್ರಚೋದನಕಾರಿ ಭಾಷಣಗಳನ್ನು ಮಾಡುವಲ್ಲಿ ನಿಷ್ಣಾತರು.

ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯಿಬಾ ಸಂಘಟನೆ ಮುಸ್ಲಿಮರ ಪವಿತ್ರ ಸ್ಥಳಗಳಾದ ದರ್ಗಾಗಳ ಮೇಲೆ ನಂಬಿಕೆ ಇಲ್ಲ.

ಹಾಗಾಗಿ ದರ್ಗಾಗಳ ಮೇಲೆ ದಾಳಿ ನಡೆಸಿದರೆ ಅದು ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಉದ್ದೇಶ ಅದರದ್ದು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ ದಾಳಿ ನಡೆಸಿ ಒಬ್ಬ ವಿಜ್ಞಾನಿಯನ್ನು ತಮ್ಮ ಗುಂಡಿಗೆ ಬಲಿ ತೆಗೆದುಕೊಂಡ ಪ್ರಕರಣದ ಸಂಬಂಧ ಬಂಧಿತರಾದ ಉಗ್ರರನ್ನು ತನಿಖೆಗೆ ಒಳಪಡಿಸಿದಾಗ ಭಾರತದಲ್ಲಿರುವ ಪ್ರಮುಖ ದರ್ಗಾಗಳು ಅವರ ರಾಡಾರ್ ವ್ಯಾಪ್ತಿಯಲ್ಲಿದ್ದವು ಎಂಬುದು ವಿಚಾರಣಾ ಸಂಸ್ಥೆಗಳಿಗೆ ಪತ್ತೆ ಯಾಗಿದೆ.

ಇದೇ ಸಂಘಟನೆ ಅಜ್ಮೀರದ ಸುಫಿ ಸಂತ ಖ್ವಾಜ ಮೊಯಿನುದ್ದೀನ್ ಚಿಸಿಯ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ ಎಂದು ಗುಪ್ತ ಚರ ಇಲಾಖೆಯ ಮೂಲಗಳು ತಿಳಿಸಿವೆ.
ಮತ್ತಷ್ಟು
ದುರ್ಗಾಮಾತೆ ಉತ್ಸವದ ವೈಭವ:
ಬಿಜೆಪಿ ರಹಸ್ಯ ಮಾತುಕತೆ ಬಹಿರಂಗ: ದತ್ತಾ
ಮಳೆ ಸಂತ್ರಸ್ತರಿಗೆ ದೊರೆಯದ ಪರಿಹಾರ
ಮೈಸೂರು ದಸರೆ: ಕ್ರೀಡಾಕೂಟ, ಚಿಗುರು ಕವಿಗೋಷ್ಠಿ
ಸಂಕೀರ್ತನಾ ಯಾತ್ರೆಗೆ ಅನುಮತಿ :ಸಭೆ
ತಂದೆ ಪಾದಯಾತ್ರೆಯ ಹಾದಿಯಲ್ಲಿ ಕುಮಾರ