ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದತ್ತಮಾಲ ಅಭಿಯಾನ: ಬಿಗಿ ಬಂದೋಬಸ್ತ್
ರಾಜ್ಯದಲ್ಲಿ ಈ ತಿಂಗಳ 22ರಿಂದ ನಡೆಯಲಿರುವ ದತ್ತಮಾಲಾ ಅಭಿಯಾನ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಹಾಗೂ ಶಾಂತಿ ಕದಡಲು ಅವಕಾಶ ಇಲ್ಲದಂತೆ ಎಲ್ಲ ಬಂದೋಬಸ್ತ್ ಕ್ರಮಗಳನ್ನು ರಾಜ್ಯಾಡಳಿತ ಕೈಗೊಳ್ಳಲಿದೆ.

ದತ್ತಪೀಠದ ಸುತ್ತಮುತ್ತ ಸಂಕೀರ್ತನಕ್ಕೆ ಅವಕಾಶ ಇಲ್ಲ ಎಂದು ಈಗಾಗಲೇ ಚಿಕ್ಕಮಗಳೂರು ಜಿಲ್ಲಾಡಳಿತ ಬಜರಂಗದಳವೂ ಸೇರಿದಂತೆ ಹಿಂದೂ ಪರ ಸಂಘಟನೆಗಳಿಗೆ ಸ್ಪಷ್ಟ ಪಡಿಸಿದೆ.

ಬಿಜೆಪಿಗೆ ಮೆರವಣಿಗೆ ನಡೆಸಲು ಅವಕಾಶ ನೀಡಬಾರದು ಎಂದು ರಾಜ್ಯಪಾಲರಿಗೆ ಮಾಜಿ ಸಚಿವ ಡಿ. ಬಿ.ಚಂದ್ರೇಗೌಡ ಮನವಿ ಮಾಡಿದ್ದಾರೆ.

ದಕ್ಷಿಣ ಭಾರತದಲ್ಲಿ ದತ್ತಪೀಠವನ್ನು ಅಯೋಧ್ಯವನ್ನಾಗಿ ಮಾಡಲು ಬಿಜೆಪಿ ಪಣತೊಟ್ಟಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೇಳಿಕೆ ನೀಡಿರುವುದರಿಂದ ಚಿಕ್ಕಮಗಳೂರಿನ ಜನರು ಭೀತಿಗೊಂಡಿದ್ದಾರೆ ಎಂದು ಚಂದ್ರೇಗೌಡ ಅವರು ತಿಳಿಸಿದ್ದಾರೆ.

ಈ ನಡುವೆ ಸಂಕೀರ್ತನಾ ಅಭಿಯಾನ ವೇದಿಕೆ ಅಭಿಯಾನ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲು ಚಿಕ್ಕಮಗಳೂರಿನಲ್ಲಿ ಇದೇ 17ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಈ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಸಂಘಟನೆಗಳು ಮನವಿ ಮಾಡಿವೆ.
ಮತ್ತಷ್ಟು
ಧರ್ಮದ ಹೆಸರಿನಲ್ಲಿ ಸಿಮ್‌ಗೆ ಜೆಹಾದ್ ಗುರಿ
ದುರ್ಗಾಮಾತೆ ಉತ್ಸವದ ವೈಭವ:
ಬಿಜೆಪಿ ರಹಸ್ಯ ಮಾತುಕತೆ ಬಹಿರಂಗ: ದತ್ತಾ
ಮಳೆ ಸಂತ್ರಸ್ತರಿಗೆ ದೊರೆಯದ ಪರಿಹಾರ
ಮೈಸೂರು ದಸರೆ: ಕ್ರೀಡಾಕೂಟ, ಚಿಗುರು ಕವಿಗೋಷ್ಠಿ
ಸಂಕೀರ್ತನಾ ಯಾತ್ರೆಗೆ ಅನುಮತಿ :ಸಭೆ