ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜಲಪಾತೋತ್ಸವಕ್ಕೆ ಸರಕಾರ ನಿರ್ಲಕ್ಷ್ಯ
ಕರ್ನಾಟಕ ಕಂಡ ಅದ್ಬುತ ಪ್ರತಿಭಾವಂತ ಎಂಜಿನಿಯರ್ ಸರ್ ಎಂ.ವಿ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಗೆ ಪ್ರತೀಕವಾದ ಗಗನಚುಕ್ಕಿ ಭರಚುಕ್ಕಿ ಜಲಪಾತೋತ್ಸವಕ್ಕೆ ಸರ್ಕಾರ ಎಳ್ಳು ನೀರು ಬಿಟ್ಟಿದೆ.

ಕೆಲ ತಿಂಗಳ ಹಿಂದೆ ಜಲಪಾತೋತ್ಸವವನ್ನು ವಿಜೃಂಭಣೆಯಿಂದ ನಡೆಸುವುದಾಗಿ ಆಗಿನ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಮಹದೇವಪ್ರಸಾದ್ ಪ್ರಕಟಿಸಿದ್ದರು.

ಅವರ ಸರ್ಕಾರ ಪತನವಾಗಿದೆ. ಹಾಗಾಗಿ ಅವರ ಹೇಳಿಕೆಗಳು ಹಿಟ್ ಅಂಡ್ ರನ್‌ನಂತಾಗಿವೆ. ಮೈಸೂರು ದಸರಾ ಉತ್ಸವವನ್ನು ವೈಭವವಾಗಿ ನಡೆಸುತ್ತಿರುವ ಸರ್ಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1911ರಲ್ಲಿ ಆ ಯೋಜನೆ ಉದ್ಘಾಟನೆಗೊಂಡು 1932ರಲ್ಲಿ ಪೂರ್ಣಗೊಂಡಿತು.

ಹಾಗಾಗಿ ಆ ಜಲಾಶಯ ಮೈಸೂರು, ಬೆಂಗಳೂರು ಹಾಗೂ ಮಂಡ್ಯಜಿಲ್ಲೆಗಳಿಗೆ ಜೀವನಾಡಿಯಾಗಿದೆ. ಅದನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಸಾಕಷ್ಟು ಅವಕಾಶಗಳಿದ್ದರೂ ಸರ್ಕಾರ ಆ ನಿಟ್ಟಿನಲ್ಲಿ ಸೂಕ್ತ ಪ್ರಯತ್ನಗಳನ್ನು ಮಾಡುತ್ತಿಲ್ಲ.
ಮತ್ತಷ್ಟು
ದತ್ತಮಾಲ ಅಭಿಯಾನ: ಬಿಗಿ ಬಂದೋಬಸ್ತ್
ಧರ್ಮದ ಹೆಸರಿನಲ್ಲಿ ಸಿಮ್‌ಗೆ ಜೆಹಾದ್ ಗುರಿ
ದುರ್ಗಾಮಾತೆ ಉತ್ಸವದ ವೈಭವ:
ಬಿಜೆಪಿ ರಹಸ್ಯ ಮಾತುಕತೆ ಬಹಿರಂಗ: ದತ್ತಾ
ಮಳೆ ಸಂತ್ರಸ್ತರಿಗೆ ದೊರೆಯದ ಪರಿಹಾರ
ಮೈಸೂರು ದಸರೆ: ಕ್ರೀಡಾಕೂಟ, ಚಿಗುರು ಕವಿಗೋಷ್ಠಿ