ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೈಸೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ
ಮೈಸೂರು ದಸರೆಯ ಅಂಗವಾಗಿ ಮಂಗಳವಾರ ಹಲವಾರು ಕಾರ್ಯಕ್ರಮಗಳು ನಡೆದಿವೆ. ಬೆಳಗ್ಗೆ ವಿವಿಧ ವಯೋಮಾನದವರಿಗಾಗಿ 6ರಿಂದ 21 ಕಿ.ಮಿ. ಗಳು ಕ್ರಮಿಸುವ ವಿವಿಧ ವಿಭಾಗಗಳ ಮೈಸೂರು ದಸರಾ ಮಾರಥಾನ್ ಓಟದ ಸ್ಪರ್ಧೆ ನಡೆಯಿತು.

ಬಾಲಕರಿಂದ 80 ವರ್ಷದವರೆಗಿನ ವಿವಿಧ ವಯೋಮಾನದವರು ಇದರಲ್ಲಿ ಪಾಲ್ಗೊಂಡಿದ್ದರು. ಬುಧವಾರ ಭಾರತೀಯ ವಾಯುಪಡೆಯ ವಿಮಾನಗಳ ಹಾರಾಟ ಪ್ರದರ್ಶನ ನಡೆಯಲಿದೆ.

ಆ ಪ್ರದರ್ಶನದ ಪೂರ್ವಭಾವಿಯಾಗಿ ಮಂಗಳವಾರ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಹಾರಾಟ ಪ್ರದರ್ಶನ ನಡೆಯಿತು.

ಈ ಪ್ರದರ್ಶನ ಆಕರ್ಷಣೀಯವಾಗಿರಲಿಲ್ಲ, ಹಾಗೂ ಈ ಪ್ರದರ್ಶನಕ್ಕೆ ನೀರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಜನರು ಬರಲಿಲ್ಲ. ಅದಕ್ಕೆ ಕಾರಣ ಪ್ರಚಾರದ ಕೊರತೆ ಹಾಗೂ ಪೊಲೀಸರ ಅತಿಯಾದ ಭದ್ರತಾ ಕ್ರಮಗಳು ಎಂದು ಹೇಳಲಾಗಿದೆ.

ಹೆಲಿಕ್ಯಾಪ್ಟರ್‌ನಿಂದ ಪ್ಯಾರಾಚೂಟ್ ಬಳಸಿ ಧರೆಗೆ ಇಳಿಯುವ ಹಾಗೂ ಇನ್ನಿತರ ಪ್ರದರ್ಶನಗಳಿದ್ದರೂ ಪ್ರದರ್ಶನ ನೀರಸವಾಗಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.

ಇಂದಿನ ಪ್ರದರ್ಶನದ ಕೊರತೆಗಳನ್ನು ನಾಳೆ ನಡೆಯುವ ಪ್ರದರ್ಶನದಲ್ಲಿ ಇಲ್ಲದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಮತ್ತಷ್ಟು
ಕುಮಾರಸ್ವಾಮಿ ವಿರುದ್ಧ ಗಣಿರೆಡ್ಡಿ ಅರ್ಜಿ
ರೆಸಾರ್ಟ್ ರಾಜಕೀಯಕ್ಕೆ ಜೆಡಿಎಸ್
ಜಲಪಾತೋತ್ಸವಕ್ಕೆ ಸರಕಾರ ನಿರ್ಲಕ್ಷ್ಯ
ದತ್ತಮಾಲ ಅಭಿಯಾನ: ಬಿಗಿ ಬಂದೋಬಸ್ತ್
ಧರ್ಮದ ಹೆಸರಿನಲ್ಲಿ ಸಿಮ್‌ಗೆ ಜೆಹಾದ್ ಗುರಿ
ದುರ್ಗಾಮಾತೆ ಉತ್ಸವದ ವೈಭವ: