ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜಕೀಯ ಮೀಸಲಾತಿ: ಬ್ರಾಹ್ಮಣ ಸಂಘ ಭಾರೀ ಪ್ರತಿಭಟನೆ
ಬ್ರಾಹ್ಮಣ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಒತ್ತಾಯಿಸಿ ನಗರದ ಪುರಭವನದ ಎದುರು ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘ ಭಾರೀ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಘದ ಸಂಚಾಲಕ ಹೆಚ್.ಜಿ.ಲಕ್ಷ್ಮೀನಾರಾಯಣ ದೇಶದ ಪ್ರಗತಿ, ಆಗುಹೋಗುಗಳಲ್ಲಿ ರಾಜಕೀಯ ಕ್ಷೇತ್ರ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಜ್ಙಾನಿಗಳು, ಬುದ್ದಿವಂತರು ವಿದ್ಯಾವಂತರು, ಮೇಧಾವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾದ ದೇಶದ ಆಗುಹೋಗುಗಳು, ದುರ್ದೈವದಿಂದಾಗಿ ಹಣಬಲ, ತೋಳ್ಬಲ, ಜಾತಿಪ್ರತಿನಿಧಿಗಳ ಕೈಯಲ್ಲಿ ಸಮಾಜ ನರಳುತ್ತಿದೆ. ಆಯಾಯ ಜಾತಿ ಪ್ರತಿನಿಧಿಗಳಿಲ್ಲದಿದ್ದರೆ ಆ ಸಮುದಾಯವನ್ನು ಕಡೆಗಣಿಸಿ ಮೂಲೆಗುಂಪು ಮಾಡುವ ಸನ್ನಿವೇಶಗಳೆ ಹೆಚ್ಚಾಗಿದೆ. ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಪ್ರಕಾಶ್ ಇಡೀ ವಿಶ್ವಕ್ಕೆ ಬ್ರಾಹ್ಮಣರ ಕೊದುಗೆ ಅಪಾರ. ಆದರೆ ಕರ್ನಾಟಕದ ಎಲ್ಲಾ ರಾಷ್ಟ್ತ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು "ಬ್ರಾಹ್ಮಣ"ರನ್ನು ರಾಜಕೀಯವಾಗಿ ಶೋಷಿಸುತ್ತಿದೆ. ರಾಜಕೀಯ ಪಕ್ಷಗಳ ಉದಯ, ಬೆಳವಣಿಗೆ, ಅಧಿಕಾರ ಸೂತ್ರ ಹಿಡಿಯುವಲ್ಲಿ ಬ್ರಾಹ್ಮಣರ ಸಲಹೆ, ಸರ್ಕಾರ, ಸಾಧನೆ ಎಲ್ಲರಿಗೂ ಬೇಕಾಗಿದೆ. ಆದರೆ ಅಂತಹಾ ಸಮುದಾಯವನ್ನೇ ಈಗ ಮೂಲೆ ಗುಂಪಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೌಶ ವ್ಯಕ್ತಪಡಿಸಿದರು.

ಯಾವುದೇ ರಾಜಕೀಯ ಪಕ್ಷ ಬ್ರಾಹ್ಮಣರನ್ನು ಗೌರವಿಸಿ, ಪ್ರಾತಿನಿದ್ಯ ನೀಡುತ್ತದೆಯೋ, ಅದನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವ ನಿರ್ಧಾರವನ್ನು ಸಂಘಟನೆಗಳು ವ್ಯಕ್ತಪಡಿಸಿವೆ.

ಪ್ರತಿಭಟನಾ ಸಭೆಯಲ್ಲಿ ರಾಜ್ಯ ದ ವಿವಿಧೆಡೆಗಳಿಂದ ಆಗಮಿಸಿದ ಬ್ರಾಹ್ಮಣ ಪ್ರತಿನಿಧಿಗಳು ಹಾಜರಿದ್ದರು.
ಮತ್ತಷ್ಟು
ಪಕ್ಷಗಳ ವೈಮನಸ್ಸು: ಚುನಾವಣೆ ಅನಿವಾರ್ಯ
ಮೈಸೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ
ಕುಮಾರಸ್ವಾಮಿ ವಿರುದ್ಧ ಗಣಿರೆಡ್ಡಿ ಅರ್ಜಿ
ರೆಸಾರ್ಟ್ ರಾಜಕೀಯಕ್ಕೆ ಜೆಡಿಎಸ್
ಜಲಪಾತೋತ್ಸವಕ್ಕೆ ಸರಕಾರ ನಿರ್ಲಕ್ಷ್ಯ
ದತ್ತಮಾಲ ಅಭಿಯಾನ: ಬಿಗಿ ಬಂದೋಬಸ್ತ್