ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜಕೀಯ ಕಸರತ್ತು: ಪಕ್ಷಗಳ ನಿಗೂಢ ನಿಲುವು
ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಗೆ ಒಂದೆರಡು ದಿನಗಳ ಒಳಗೆ ಸ್ಪಷ್ಟ ರೂಪ ಪಡೆಯುವುದು ಖಚಿತವಾಗಿದೆ.

ವಿಧಾನಸಭೆ ಅಮಾನತ್ತಿಲ್ಲಿಟ್ಟು ನಂತರದ ಕರ್ನಾಟಕದ ಬೆಳವಣಿಗೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಕಾಂಗ್ರೆಸ್ ಜಾತ್ಯತೀತ ಜನತಾದಳದ ಶಾಸಕರ ಭಾವನೆ ಅಧರಿಸಿ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದೆ.

ಈ ಸಂಬಂಧದಲ್ಲಿ ಯಾವುದೇ ರೀತಿಯಲ್ಲಿ ಬಹಿರಂಗ ನಿಲುವು ಪ್ರಕಟಣೆಗೆ ದಿಗ್ಬಂಧನ ಹಾಕಿರುವ ಹೈಕಮಾಂಡ್ ಬುಧವಾರದ ಹೊತ್ತಿಗೆ ಅಂತಿಮ ನಿರ್ಧಾರ ಪ್ರಕಟಿಸುವ ನೀರೀಕ್ಷೆಯಿದೆ.

ಐದಾರು ದಿನಗಳಿಂದ ಒಳಗೊಳಗೆ ಮುಖಂಡರ ಬಹಿರಂಗ ನಿಲುವುಗಳು ವ್ಯಕ್ತವಾಗುತ್ತಿದ್ದು, ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಕಾಂಗ್ರೆಸ್ -ಜೆಡಿಎಸ್ ಸರ್ಕಾರ ರಚನೆಗೆ ಕೆಲವರು ಯತ್ನಗಳು ಸಾಗಿರುವಂತೆಯೇ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಜೆಡಿಯಸ್ ಶಾಸಕರ ಗುಂಪೊಂದು ಮುಂದಾಗಿದೆ.

ದಸರಾ ಹಬ್ಬದ ಮುಕ್ತಾಯ ವೇಳೆಗೆ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ನಡುವೆ ಜೆಡಿಯಸ್ ಶಾಸಕರ ಗುಂಪೊಂದು ಬಿಜೆಪಿ ಜತೆ ಮರು ಮೈತ್ರಿ ಏರ್ಪಡಿಸಿಕೊಳ್ಳುಲು ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ಬಾಕಿ ಇರುವ 20 ತಿಂಗಳ ಅವಧಿಯನ್ನು ತಲಾಹತ್ತು ತಿಂಗಳಿನಂತೆ ಹಂಚಿಕೊಂಡು ಸರ್ಕಾರ ರಚಿಸುವುದು ಜೆಡಿಯಸ್ ಶಾಸಕರ ಗುರಿಯಾಗಿದೆ. ಆದರೆ ಇದಕ್ಕೆ ಭಾರತೀಯ ಜನತಾ ಪಕ್ಷದ ಒಪ್ಪಿಗೆ ಕಷ್ಟ. .ಸರ್ಕಾರದ ನಾಯಕತ್ವ ಕೊನೇ ಘಳಿಗೆಯಲ್ಲಿ ಕೈತಪ್ಪಿರುವ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನನೀಡಿ ಹೊಸ ರಾಜಕೀಯ ಅಧ್ಯಾಯ ಆರಂಭಿಸುವುದು ಜೆಡಿಯಸ್ ಶಾಸಕರ ಅಪೇಕ್ಷೆ ಎನ್ನಲಾಗಿದೆ.

ಈ ಮೂಲಕ ವಚನ ಭ್ರಷ್ಟ ಎಂಬ ಹಣೆ ಪಟ್ಟಿ ದೂರವಾಗುವ ಕನಸು ಜೆಡಿಎಸ್ ಪಕ್ಷದ್ದು. ಇದಕ್ಕೆ ಪ್ರತಿಯಾಗಿ ಜೆಡಿಎ‌ಸ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೂಡುವ ಸಾಧ್ಯತೆಗಳಿವೆ. ಎಲ್ಲವೊ ಅಂದುಕೊಂಡಂತಯೇ ನಡೆದರೆ ದಸರಾಹಬ್ಬದ ಒಳಗೆ,ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ನೀರೀಕ್ಷಯಿದೆ .ಆದರೆ ಹೊಸ ಸರ್ಕಾರ ರಚನೆಗೆ ರಾಜ್ಯಪಾಲರ ಅನುಮತಿ ಅನಿವಾರ್ಯ.

ಮತ್ತಷ್ಟು
ದಸರಾ ಅಂತ್ಯದೊಳಗೆ ಹೊಸ ಸರಕಾರ?
ಜೆಡಿಎಸ್ ರೆಸಾರ್ಟ್ ಸಭೆ ವಿಫಲ
ರಾಜಕೀಯ ಮೀಸಲಾತಿ: ಬ್ರಾಹ್ಮಣ ಸಂಘ ಭಾರೀ ಪ್ರತಿಭಟನೆ
ಪಕ್ಷಗಳ ವೈಮನಸ್ಸು: ಚುನಾವಣೆ ಅನಿವಾರ್ಯ
ಮೈಸೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ
ಕುಮಾರಸ್ವಾಮಿ ವಿರುದ್ಧ ಗಣಿರೆಡ್ಡಿ ಅರ್ಜಿ