ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸರ್ಕಾರ ರಚಿಸಲು ಮಠಾಧಿಪತಿಗಳ ಸಾಥ್ !
ರಾಷ್ಟ್ತ್ರಪತಿ ಆಡಳಿತಕ್ಕೆ ಒಳಗಾಗಿರುವ ಕರ್ನಾಟಕದಲ್ಲಿ ಇದೀಗ ಹೊಸ ಸರ್ಕಾರ ರಚಿಸಲು ಮಠಾಧಿಪತಿಗಳು ಮಧ್ಯಸ್ಥಿಕೆ ಆರಂಭಿಸಿದ್ದಾರೆ. ಆದಿಚುಂಚನ ಗಿರಿ ಬಾಲಗಂಗಾಧರ ನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಇವರಲ್ಲಿ ಪ್ರಮುಖರಾಗಿದ್ದಾರೆ.

ಈ ಇಬ್ಬರು ಮಠಾಧೀಶರ ರಾಜಕೀಯ ಆಸಕ್ತಿಯನ್ನು ಗಮನಿಸಿದ್ದರೆ ಈ ಹಿಂದಿನ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರವೇ ಮುಂದುವರಿಯಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಇದರಿಂದ ರಾಜ್ಯ ರಾಜಕೀಯ ಮತ್ತೊಂದು ಕುತೂಹಲದ ಮಜಲನ್ನು ತಲುಪುತ್ತಿದೆ. ಜೆಡಿಎಸ್ ಜತೆ ಮರುಮೈತ್ರಿ ಮಾಡಿಕೊಂಡು ಉಳಿದ ಅವಧಿಗೆ ಸರ್ಕಾರ ಮುಂದುವರಿಸಿ ಎಂದು ರಾಷ್ಟ್ತ್ರೀಯ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಸಲಹೆ ಮಾಡಿದ್ದಾಗಿ ಪೇಜಾವರ ಶ್ರೀ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ್ದಾರೆ.

ಈ ನಡುವೆ ಆದಿಚುಂಚನಗಿರಿ ಸ್ವಾಮೀಜಿ ಕುಮಾರಸ್ವಾಮಿಯವರ ಮನವೊಲಿಸಲು ಭಾರೀ ಪ್ರಯತ್ನ ನಡೆಸಿದ್ದಾರೆ.

ಈ ಈರ್ವರು ಹಿರಿಯ ಸ್ವಾಮೀಜಿಯವರಲ್ಲಿ ಓರ್ವರು ಸಂಘ ಪರಿವಾರಕ್ಕೆ ನಿಕಟವಾಗಿದ್ದರೆ ಮತ್ತೋರ್ವರು ಒಕ್ಕಲಿಗ ಸಮುದಾಯಕ್ಕೆ ಹತ್ತಿರವಾಗಿದ್ದಾರೆ ಎಂಬುದು ಗಮನಾರ್ಹ.

ಈ ಹಿಂದೆ ಮೈತ್ರಿ ಸರ್ಕಾರದ ಸಂಬಂಧ ಹಳಸುತ್ತಿರುವ ಸಂದರ್ಭದಲ್ಲಿ ಈ ಮಠಾಧಿ ಪತಿಗಳು ಸರ್ಕಾರ ಬೀಳದಂತೆ ಪ್ರಯತ್ನ ನಡೆಸಿದ್ದರು. ಸರ್ಕಾರ ಪತನಗೊಂಡ ದಿನವೇ ಉಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಯಡಿಯೂರಪ್ಪ ಸಿದ್ಧಗಂಗಾ ಶ್ರೀಗಳ ಮೊರೆ ಹೋಗಿದ್ದರು.

ಈ ಬಾರಿಯ ದಸರಾ ಉದ್ಘಾಟನೆಗೆ ನಿಯೋಜಿತಗೊಂಡಿದ್ದ ಡಾ.ಶಿವಕುಮಾರಸ್ವಾಮೀಜಿ ಈ ಬೆಳವಣಿಗೆಗಳಿಂದ ಉದ್ಘಾಟನೆಗೆ ನಿರಾಕರಿಸಿದ್ದರು. ಲಿಂಗಾಯಿತ ಸಮುದಾಯದ ಪ್ರಬಲ ಸ್ವಾಮೀಜಿ ಎಂದೇ ಬಿಂಬಿತವಾಗಿರುವ ಶ್ರೀಗಳ ನಡೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಮತ್ತಷ್ಟು
ರಾಜಕೀಯ ಕಸರತ್ತು: ಪಕ್ಷಗಳ ನಿಗೂಢ ನಿಲುವು
ದಸರಾ ಅಂತ್ಯದೊಳಗೆ ಹೊಸ ಸರಕಾರ?
ಜೆಡಿಎಸ್ ರೆಸಾರ್ಟ್ ಸಭೆ ವಿಫಲ
ರಾಜಕೀಯ ಮೀಸಲಾತಿ: ಬ್ರಾಹ್ಮಣ ಸಂಘ ಭಾರೀ ಪ್ರತಿಭಟನೆ
ಪಕ್ಷಗಳ ವೈಮನಸ್ಸು: ಚುನಾವಣೆ ಅನಿವಾರ್ಯ
ಮೈಸೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ